ಮಡಿಕೇರಿ, ಜ. 8: ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಜನಾರ್ಧನ್ ಅವರಿಗೆ ಸ್ವಾಗತ ಹಾಗೂ ಈ ಹುದ್ದೆಯಿಂದ ನಿರ್ಗಮಿಸಿದ ಜಗನ್ನಾಥ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಪ್ರವಾಸೋದ್ಯಮ ಕಚೇರಿಯಲ್ಲಿ ನಡೆಯಿತು. ಜಿಲ್ಲಾ ರೆಸಾರ್ಟ್, ಹೊಟೇಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಪರವಾಗಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಖಜಾಂಚಿ ಭಾಸ್ಕರ್, ಉಪಾಧ್ಯಕ್ಷ ಜಾಹೀರ್, ಕಾರ್ಯದರ್ಶಿ ನಾಸೀರ್, ಪದಾಧಿಕಾರಿಗಳಾದ ಮೋಹನ್‍ದಾಸ್, ಆಸೀಫ್, ಕೋಠಿ, ಸಿದ್ದು, ಸಲಹೆಗಾರ ಜಿ. ಚಿದ್ವಿಲಾಸ್, ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಬಿ.ಎನ್. ಪ್ರಕಾಶ್, ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಸತ್ಯ, ವಸಂತ್ ಹಾಗೂ ಇತರರು ಪಾಲ್ಗೊಂಡಿದ್ದರು.