ಸುಂಟಿಕೊಪ್ಪ, ಜ. 7: ದುಡಿಯುವ ವರ್ಗ ಕಾರ್ಮಿಕರ ಕೃಷಿಕರ ಹಿತಾಶಕ್ತಿಯನ್ನು ಕಾಪಾಡದೆ ದೇಶದ ಅರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರ ವಿರುದ್ಧ 10 ಕಾರ್ಮಿಕ ಸಂಘಟನೆ ಗಳು ತಾ. 8 ಮತು ಮತ್ತು 9 ರಂದು ದೇಶವ್ಯಾಪಿ ಮುಷ್ಕರ ನಡೆಸÀುತ್ತಿದೆ ಎಂದು ಕೊಡಗು ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.
ಇಲ್ಲಿನ ಕಾರು ನಿಲ್ದಾಣದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಹೊಸ ಆರ್ಥಿಕ ನೀತಿ ವೇಗವಾಗಿ ಜಾರಿಗೊಳಿಸಲು ಹವಣಿಸುತ್ತಿರುವ ಕೇಂದ್ರ ಸರಕಾರ, 7ನೇ ವೇತನ ಆಯೋಗ ಶಿಫಾರಸ್ಸಿನಂತೆ ಕಾರ್ಮಿಕರಿಗೆ ರೂ 18,000 ಕನಿಷ್ಟ ವೇತನ ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ವಾಹನ ಚಾಲಕರ ಬದುಕು ಅತಂತ್ರವಾಗಿದೆ ಪ್ರಧಾನಿ ನರೇಂದ್ರ ಮೋದಿ ಬಂಡವಾಳ ಶಾಹಿಗಳ ಸಾಲ ಮನ್ನಕ್ಕೆ ಆದ್ಯತೆ ನೀಡಿ ರೈತರ ಸಾಲ ಮನ್ನಾಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದರು.
ಕಾರ್ಮಿಕ ಸಂಘಟನೆಯ ಪ್ರಮುಖರಾದ ಪಿ.ಆರ್. ಭರತ್, ಎನ್.ಡಿ. ಕುಟ್ಟಪ್ಪ, ರಾಜಪ್ಪ, ಉಮೇಶ ಮುಷ್ಕರದ ಬಗ್ಗೆ ಮಾತನಾಡಿದರು.