ಕೊಡಗರಹಳ್ಳಿ, ಜ. 7: ಇಲ್ಲಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ‘’ಪುನರ್ ಪ್ರತಿಷ್ಠಾ ಏಳನೆ ವಾರ್ಷಿಕೋತ್ಸವ ಸಮಾರಂಭ ತಾ. 10 ರಂದು ನಡೆಯಲಿದೆ.

ಅಂದು ಪೂರ್ವಾಹ್ನ 7 ಗಂಟೆಗೆ ಮಹಾಗಣಪತಿ ಹೋಮ,8 ಗಂಟೆಗೆ ಶ್ರೀ ಶತರುದ್ರಾಭಿಷೇಕ, 9 ಗಂಟೆಗೆ ಶ್ರೀ ಚಂಡಿಕಾ ಹೋಮ, 11 ಗಂಟೆಗೆ ನವಗ್ರಹಗಳಿಗೆ ವಿಶೇಷ ಕಲಶಾಭಿಷೇಕ ಪೂಜೆ, 11.30ಕ್ಕೆ ನಾಗದೇವರಿಗೆ ವಿಶೇಷ ಪೂಜೆ, 12 ಗಂಟೆಗೆ ಮಹಾಪೂಜೆ-ತೀರ್ಥ ಪ್ರಸಾದ ವಿತರಣೆ, ಅಪರಾಹ್ನ 1 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ಟ್ರಸ್ಟ್ ತಿಳಿಸಿದೆ.