ಮಡಿಕೇರಿ, ಜ.8 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಾಂಸ್ಕøತಿಕ ಸೌರಭ ಸಾಂಸ್ಕøತಿಕ ಕಾರ್ಯಕ್ರಮವು ತಾ. 10 ರಂದು ಬೆಳಗ್ಗೆ 11 ಗಂಟೆಗೆ ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.

ಸಾಯಿಶಂಕರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ, ಪೊನ್ನಂಪೇಟೆ ಗ್ರಾ.ಪಂ.ಅಧ್ಯಕ್ಷೆ ಸುಮಿತ ಗಣೇಶ್, ಪೊನ್ನಂಪೇಟೆ ಜಿ.ಪಂ. ಸದಸ್ಯರಾದ ಶ್ರೀಜಾ ಶಾಜಿ, ವೀರಾಜಪೇಟೆ ತಾ.ಪಂ.ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕಿರುಗೂರು ಗ್ರಾ.ಪಂ. ಅಧ್ಯಕ್ಷರಾದ ಪಿ.ಎಂ. ಬೋಜಿ, ವೀರಾಜಪೇಟೆ ತಾ.ಪಂ.ಸದಸ್ಯೆ ಆಶಾ ಪೂಣಚ್ಚ ಇತರರು ಪಾಲ್ಗೊಳ್ಳಲಿದ್ದಾರೆ.