ಗೋಣಿಕೊಪ್ಪಲು,ಜ.7: ನ್ಯಾಯಾಧೀಶರುಗಳು ಒತ್ತಡದ ಸನ್ನಿವೇಶದಲ್ಲಿಯೇ ಕಾರ್ಯನಿ ರ್ವಹಿಸಬೇಕು. ದಿನದ 24 ಗಂಟೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇನ್ನು ಮನರಂಜನೆ ಬಹುದೂರವೇ. ಆದರೆ, ತಾ.6 ರ ಭಾನುವಾರ ದಿನ ಪೆÇನ್ನಂಪೇಟೆ ವಕೀಲರ ಸಂಘದ ಆಶ್ರಯದ ಕ್ರೀಡೋತ್ಸವದಲ್ಲಿ ಕೊಡಗು ಜಿಲ್ಲೆಯ 12 ನ್ಯಾಯಾಧೀಶರು, ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು, ಕೆಲವು ಪೆÇಲೀಸ ರೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ ಖುಷಿಪಟ್ಟರು. ಬಂದೂಕುವಿನಿಂದ ಬಲೂನಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕ್ರೀಡಾ ಮನೋಭಾವದೊಂದಿಗೆ ಪಾಲ್ಗೊಂಡ ನ್ಯಾಯಾಧೀಶರಲ್ಲಿ ಸೋಮವಾರಪೇಟೆಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ನ್ಯಾಯಾಧೀಶ ಪರಶುರಾಮ್ ಎಫ್.ದೊಡ್ಡಮನಿ ಪ್ರಥಮ ಬಹುಮಾನ ಗಳಿಸಿದರೆ, ವೀರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ನ್ಯಾಯಾಧೀಶರಾದ ಶಿವಾನಂದ್ ಲಕ್ಷ್ಮಣ್ ಅಂಚಿ ದ್ವಿತೀಯ ಸ್ಥಾನ ಗೆದ್ದುಕೊಂಡರು. ವಿಶೇಷವೆಂದರೆ ಮಡಿಕೇರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪವನೇಶ್ ಡಿ. ಮೊದಲಿಗರಾಗಿ ಬಲೂನಿಗೆ ಗುಂಡು ಹೊಡೆದರೂ ಸ್ಪರ್ಧೆಗೆ ತಾವಿಲ್ಲ ಎಂದು ಹಿಂದೆ ಸರಿದರು. ಮಹಿಳಾ ನ್ಯಾಯಾಧೀಶ ರಾದ ಬಿ.ಜಿ.ರಮಾ, ನೂರುನ್ನೀಸಾ ಅವರು ಇದೇ
(ಮೊದಲ ಪುಟದಿಂದ) ಪ್ರಥಮ ಬಾರಿಗೆ ಕೋವಿಯಿಂದ ಬಲೂನಿಗೆ ಗುರಿ ಇಟ್ಟು ಸಂಭ್ರಮಿಸಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಿ.ವಿ.ಮಲ್ಲಾಪೂರ್ ಸುಮಾರು ನಾಲ್ಕೈದು ಬಾರಿ ಬಲೂನಿಗೆ ಗುರಿ ಇಟ್ಟು ಆನಂದಿಸಿದರು.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಜಿಲ್ಲೆಯ 12 ನ್ಯಾಯಾಧೀಶರು, ಪೆÇನ್ನಂಪೇಟೆ ವಕೀಲರ ಸಂಘದ ವಕೀಲರು, ನ್ಯಾಯಾಂಗ ಸಿಬ್ಬಂದಿಗಳು ಒಗ್ಗೂಡಿ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿರುವದು ಇದೇ ಪ್ರಥಮ. ಪೆÇನ್ನಂಪೇಟೆ ನ್ಯಾಯಾಲಯ ಸಮುಚ್ಚಯವನ್ನು ನೋಡಿ ಮುಕ್ತ ಕಂಠದಿಂದ ಪ್ರಶಂಶಿಸಿದರು. ಪೆÇನ್ನಂಪೇಟೆ ವಕೀಲರ ಸಂಘದ ಚಟುವಟಿಕೆಯ ಬಗ್ಗೆಯೂ ನ್ಯಾಯಾಧೀಶರು ಮೆಚ್ಚುಗೆ ಪಟ್ಟರು.
ಐಬಿ ತೆರವು ಅನಿವಾರ್ಯ
ಪೆÇನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ಡಿ.ಕಾವೇರಪ್ಪ ಅವರ ಸಮ್ಮುಖದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಿ.ವಿ.ಮಲ್ಲಾಪುರ ಅವರು, ಪೆÇನ್ನಂಪೇಟೆ ಐಬಿ (ನಿರೀಕ್ಷಣಾ ಮಂದಿರ) ತೆರವಿಗೆ ರಾಜ್ಯ ಉಚ್ಚನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾಧಿಕಾರಿ ಆದೇಶ ನೀಡಿದ್ದು ಶೀಘ್ರದಲ್ಲಿಯೇ ತೆರವುಗೊಳಿಸ ಲಾಗುವದು. ನ್ಯಾಯಾಲಯದ ಆವರಣದಲ್ಲಿ ‘ಕ್ಯಾಂಟೀನ್’ ಅಥವಾ ಮಿನಿ ಹೊಟೇಲ್‍ಗೆ ನಿರ್ಮಿಸಲಾದ ಕಟ್ಟಡವನ್ನು ಲೋಕ ಅದಾಲತ್ ಅಥವಾ ಇತರ ಉದ್ದೇಶಕ್ಕೆ ಬಳಸುವಂತಿಲ್ಲ. ಶೀಘ್ರದಲ್ಲಿಯೇ ‘ಕ್ಯಾಂಟೀನ್’ಗೆ ಟೆಂಡರ್ ಕರೆಯಲಾಗುವದು ಎಂದು ಮಾಹಿತಿ ನೀಡಿದರು.
ಪೆÇನ್ನಂಪೇಟೆ ನೂತನ ನ್ಯಾಯಾಲಯ ಸಮುಚ್ಛಯಕ್ಕೆ ಡಿ.23 ಕ್ಕೆ ಒಂದು ವರ್ಷ ತುಂಬಿದ್ದು, ಇದೇ ಪ್ರಥಮ ಬಾರಿಗೆ ಮಡಿಕೇರಿಯಿಂದ ಹೊರಭಾಗ ಪೆÇನ್ನಂಪೇಟೆ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ನ್ಯಾಯಾಧೀಶರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಕಕ್ಷಿದಾರರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಯಾವದೇ ಪ್ರಕರಣವನ್ನು ಜಿಲ್ಲಾ ಮಟ್ಟದಲ್ಲಿಯೇ ಇತ್ಯರ್ಥ ಪಡಿಸಲು ಇಲ್ಲಿನ ವಕೀಲರು, ಮಧ್ಯವರ್ತಿಗಳು ಅಥವಾ ಲೋಕ ಅದಾಲತ್‍ನಲ್ಲಿ ಪ್ರಯತ್ನಿಸಲು ಸಹಕಾರ ಅಗತ್ಯ. ಪ್ರಕರಣ ರಾಜ್ಯ ಉಚ್ಚ ನ್ಯಾಯಾಲಯ ಮೆಟ್ಟಿಲೇರುವದರಿಂದ ಕಕ್ಷಿದಾರರಿಗೆ ನ್ಯಾಯ ಸಿಗುವದು ವಿಳಂಬವಾಗುತ್ತದೆ ಎಂದರು. ಕಾನೂನು ಸೇವಾ ಸಮಿತಿಯ ಸಹಕಾರದೊಂದಿಗೆ ಕಕ್ಷಿದಾರರಿಗೆ ಬೆಂಗಳೂರು, ನವದೆಹಲಿ ಎಂದು ತೆರಳುವ ದುಂದುವೆಚ್ಚ ಹಾಗೂ ಸಮಯವನ್ನು ಉಳಿತಾಯ ಮಾಡಿಕೊಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಧೀಶರ ಮತ್ತೊಂದು ನೂತನ ವಸತಿ ಗೃಹ, ಸಮುಚ್ಛಯದ ಆವರಣ ಗೋಡೆ ನಿರ್ಮಾಣದ ಬಗ್ಗೆ ಕೊಡಗು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ ಮಾಹಿತಿ ನೀಡಲಾಗಿದೆ. ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಾಗಿದೆ ಎಂದರು. ರಾಜ್ಯದಲ್ಲಿ ಸರ್ಕಾರಿ ಅಭಿಯೋಜಕರ ಕೊರತೆ ಹಿನ್ನೆಲೆ ಪೆÇನ್ನಂಪೇಟೆಗೆ ವಾರಕ್ಕೆ 4 ದಿನ ಕರ್ತವ್ಯ ನಿರ್ವಹಿಸಲು ಮೈಸೂರು ನ್ಯಾಯಾಲಯದಿಂದ ಎಪಿಪಿ ನಿಯೋಜನೆಗೆ ಪ್ರಯತ್ನ ನಡೆದಿದೆ. ವಯೋವೃದ್ಧರು, ಹಿರಿಯ ನಾಗರಿಕರು, ವಿಕಲಾಂಗರಿಗೆ ನ್ಯಾಯಾಲಯದ ಎರಡು, ಮೂರನೆ ಅಂತಸ್ತು ಏರಲು ಅನುವಾಗುವ ನಿಟ್ಟಿನಲ್ಲಿ ಮೊದಲಿಗೆ ಜನರೇಟರ್ ಅಳವಡಿಕೆ ಹಾಗೂ ‘ಲಿ¥sóï್ಟ’ ವ್ಯವಸ್ಥೆ ಬಗ್ಗೆ ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿ ಬಳಿ ಮಾತುಕತೆ ನಡೆದಿರುವದಾಗಿ ತಿಳಿಸಿದರು.
ಕಾನೂನು ಪರಿಜ್ಞಾನ ಅಗತ್ಯ
ಕೊಡಗು ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್ ಅವರು ಮಾತನಾಡಿ, ವಕೀಲರು ಏನೂ ಗೊತ್ತಿಲ್ಲದೆ ವ್ಯಾಜ್ಯ ಕೈಗೆತ್ತಿಕೊಳ್ಳಬಾರದು. ಅಂತರ್ಜಾಲದ ಉಪಯುಕ್ತ ಮಾಹಿತಿಯೊಂದಿಗೆ, ಪ್ರಕರಣದ ಬಗ್ಗೆ ಹೆಚ್ಚು ತಿಳುವಳಿಕೆ ಯೊಂದಿಗೆ ಈಗಿನ ಕಾನೂನು ಪರಿಜ್ಞಾನ ಅರಿತು ಕರ್ತವ್ಯ ನಿರ್ವಹಿಸಬೇಕು. ವಕೀಲರ ಸಂಘ ಮತ್ತು ನ್ಯಾಯಪೀಠ ರಥದ ಎರಡು ಚಕ್ರವಿದ್ದಂತೆ ಉತ್ತಮ ಸೇವೆಯ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
‘ಶೂಟಿಂಗ್’ ಸ್ಪರ್ಧೆಯಲ್ಲಿ ಕೋವಿ ಬಳಕೆ ಗೊತ್ತಿಲ್ಲದಿದ್ದರೂ ಪಾಲ್ಗೊಂಡ ಬಗ್ಗೆ ಸಂಭ್ರಮಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಅವರು, ಪೆÇನ್ನಂಪೇಟೆ ನ್ಯಾಯಾಲಯ ಜಿಲ್ಲೆಯಲ್ಲಿಯೇ ಅತ್ಯುತ್ತಮ, ಸುಸಜ್ಜಿತ ನ್ಯಾಯಾಲಯವಾಗಿದೆ ಎಂದರು. ಪೆÇನ್ನಂಪೇಟೆ ವಕೀಲರ ಸಂಘ ಹಮ್ಮಿಕೊಂಡಿರುವ ಇಂತಹಾ ಕಾರ್ಯಕ್ರಮದಿಂದ ವಕೀಲರು ಮತ್ತು ನ್ಯಾಯಾಧೀಶರ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ವಿಶ್ಲೇಷಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ(ಡಿಎಲ್‍ಎಸ್‍ಎ) ನೂರುನ್ನೀಸಾ ಅವರು ಮಾತನಾಡಿ, ಒಳ್ಳೆಯ ನ್ಯಾಯಾಧೀಶರು ರೂಪುಗೊಳ್ಳಲು ಉತ್ತಮ ವಕೀಲ ಅಗತ್ಯ. ವಕೀಲರಿಗೆ ಹಲವು ನ್ಯಾಯಾಧೀಶರ ಪರಿಚಯವಿರುತ್ತದೆ. ಬೆಳಗ್ಗಿನಿಂದ ಸಂಜೆಯವರೆಗೆ ನ್ಯಾಯಾಧೀಶರು ಕರ್ತವ್ಯ ನಿರ್ವಹಿಸಲು ವಕೀಲರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.
ನನ್ನ ತವರು ಮನೆ!
ಪೆÇನ್ನಂಪೇಟೆ ನ್ಯಾಯಾಲಯದ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಎಂ.ಇ.ಮೋಹನ ಗೌಡ ಅವರು ಮಾತನಾಡಿ, ನಾನು ಮೊದಲು ನ್ಯಾಯಾಧೀಶನಾಗಿ ಪೆÇನ್ನಂಪೇಟೆಗೆ ನಿಯೋಜನೆ ಗೊಂಡಿದ್ದು, ಮೊದಲ ನೂತನ ನ್ಯಾಯಾಲಯ, ಮೊದಲ ನ್ಯಾಯಾ ಧೀಶನಾಗಿರುವ ಹಿನ್ನೆಲೆ ಪೆÇನ್ನಂಪೇಟೆ ನ್ಯಾಯಾಲಯ ನನ್ನ ‘ತವರು ಮನೆ’ ಇದ್ದ ಹಾಗೆ ಎಂದು ಹೆಮ್ಮೆ ಪಟ್ಟರು.
ಪೆÇನ್ನಂಪೇಟೆ ವಕೀಲರ ಸಂಘದ ಸ್ಥಾಪಕ ಅಧ್ಯಕ್ಷ ಎ.ಟಿ.ಭೀಮಯ್ಯ ಅವರು, ಪೆÇನ್ನಂಪೇಟೆ ನ್ಯಾಯಾಲಯ ಸಮುಚ್ಛಯದಲ್ಲಿ ಇನ್ನೂ ಆಗಬೇಕಿರುವ ಹಲವು ಮೂಲಭೂತ ಸೌಲಭ್ಯಗಳ ಕುರಿತು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ವಿ.ವಿ.ಮಲ್ಲಾಪುರ ಅವರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಡಿ.ಕಾವೇರಪ್ಪ ಅವರು, ದೇಶ ದಲ್ಲಿಯೇ ಸುಸಜ್ಜಿತ ನ್ಯಾಯಾಲಯ ಸಂಕೀರ್ಣ ಗ್ರಾ.ಪಂ.ಮಟ್ಟದಲ್ಲಿ ನಿರ್ಮಾಣಗೊಳ್ಳಲು ಕಾರಣರಾದ ಹಲವರನ್ನು, ಜಿಲ್ಲಾ ಮತ್ತು ಉಚ್ಚನ್ಯಾಯಾಲಯ ನ್ಯಾಯಮೂರ್ತಿ ಗಳ, ಆಡಳಿತ ನ್ಯಾಯಾಧೀಶರ ಸಹಕಾರವನ್ನು ನೆನಪಿಸಿಕೊಂಡರು.
ಸಭೆಯಲ್ಲಿ ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ವಿಜಯಕುಮಾರ್, ಪೆÇನ್ನಂಪೇಟೆ ನ್ಯಾಯಾಲಯದಲ್ಲಿ 4 ತಿಂಗಳು ಕರ್ತವ್ಯ ನಿರ್ವಹಿಸಿದ್ದ ಮಡಿಕೇರಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ರಾದ ಬಿ.ಕೆ.ಮನು, ವೀರಾಜಪೇಟೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಶಿವಾನಂದ್ ಲಕ್ಷ್ಮಣ್ ಅಂಚಿ ಮಾತನಾಡಿದರು. ವೇದಿಕೆಯಲ್ಲಿ ಸೋಮವಾರಪೇಟೆಯ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಪರಶುರಾಮ್ ದೊಡ್ಡಮನಿ, ಕುಶಾಲನಗರದ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ರಾದ ಎಸ್.ನಟರಾಜ್, ಸೋಮ ವಾರಪೇಟೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಎಸ್.ಎಸ್. ಭರತ್, ಎಪಿಪಿ ರಾಜೇಂದ್ರ ಉಪಸ್ಥಿತರಿದ್ದರು.
ಪೆÇನ್ನಂಪೇಟೆ ನ್ಯಾಯಾಲಯ ಸಿಬ್ಬಂದಿ ದಿನೇಶ್ ಪ್ರಾರ್ಥನೆ, ವಕೀಲರ ಸಂಘದ ಖಜಾಂಚಿ ಸಂಜೀವ್ ನಾಯರ್ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾಖೇಶ್ ಸ್ವಾಗತಿಸಿ, ವಕೀಲ ಬಿ.ಎಂ.ಅಯ್ಯಪ್ಪ ವಂದಿಸಿದರು.ಕ್ರೀಡಾ ಕೂಟ ಕಾರ್ಯಕ್ರಮವನ್ನು ವಕೀಲರಾದ ಸೂರಜ್ ಮುತ್ತಣ್ಣ, ಕಂಜಿತಂಡ ಅನಿತಾ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ನಂತರ ಬಹುಮಾನ ವಿತರಣೆ ಹಾಗೂ ಸಂತೋಷಕೂಟ ಏರ್ಪಡಿಸಲಾಗಿತ್ತು.
-ವರದಿ: ಸುದ್ದಿಸಂಸ್ಥೆ, ಗೋಣಿಕೊಪ್ಪಲು