ಸಂಪಾಜೆ, ಜ. 7: ಪೆರಾಜೆ ಮತ್ತು ಚೆಂಬು ಗ್ರಾಮಗಳು ಆಡಳಿತಾತ್ಮಕವಾಗಿ ಮಡಿಕೇರಿ ಅನಿವಾರ್ಯತೆ ಇದ್ದರೂ ವ್ಯಾವಹಾರಿಕವಾಗಿ ಸುಳ್ಯವನ್ನೇ ಅವಲಂಭಿಸುವ ಅನಿವಾರ್ಯತೆ ಇದೆ. ಹಾಗಾಗಿ ಸಂಪಾಜೆಯನ್ನು ತಾಲೂಕನ್ನಾಗಿಸುವ ಅನಿವಾರ್ಯತೆ ಇದ್ದು, ಇದಕ್ಕೆ ಒಗ್ಗಟ್ಟಿನಿಂದ ಹೋರಾಟ ಅಗತ್ಯತೆ ಇದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಾಧವ ಪೆರಾಜೆ ಹೇಳಿದರು.
ಅವರು ಪೆರಾಜೆ ಜ್ಯೋತಿ ಪ್ರೌಢಶಾಲಾ ವಾರ್ಷಿಕೋತ್ಸವ- ಜೋಡುಪಾಲ ಪ್ರಕೃತಿ ದುರಂತದಲ್ಲಿ ದುಡಿದ ಯುವಕರಿಗೆ ಹಾಗೂ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಇಂಗ್ಲೀಷ್ ಕಲಿಕೆ ಅನಿವಾರ್ಯತೆ ಆದರೂ ಮಾತೃ ಭಾಷೆ ಮತ್ತು ಕನ್ನಡ ಭಾಷೆಗೆ ಒತ್ತು ನೀಡಬೇಕು; ಸಂಪಾಜೆ ತಾಲೂಕನ್ನಾಗಿ ಮಾಡಲು ಈ ಭಾಗದ ಜನ ಒತ್ತಾಯಿಸಿದರೆ ಶಾಸಕನಾಗಿ ಸರಕಾರದ ಗಮನಕ್ಕೆ ತರುತ್ತೇನೆ ಎಂದರು.
ಅಧ್ಯಕ್ಷತೆಯನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎ. ಜ್ಞಾನೇಶ್ ವಹಿಸಿದ್ದರು.
ಅತಿಥಿಗಳಾಗಿ ಜಿ.ಪಂ. ಸದಸ್ಯೆ ಕವಿತಾಪ್ರಭಾಕರ, ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀ ಧರಣೀಧರ, ಪೆರಾಜೆ ಶ್ರೀಶಾಸ್ತಾವು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ಶಾಲಾ ಸ್ಥಾಪಕ ಅಧ್ಯಾಪಕ ಡಿ.ಪಿ.ಪೂವಪ್ಪ ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಮುಡ್ಕಜೆ ಹರೀಶ್ಚಂದ್ರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಕುಂಬಳಚೇರಿ, ಜಗದೀಶ ಬಂಗಾರಕೋಡಿ, ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಉಪಸ್ಥಿತರಿ