ಮಡಿಕೇರಿ, ಜ. 7: ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಯ ಮನೆಯಿಂದ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮಕ್ಕಳಿಗೆ ಬಾಲಶಲ್ಯ ಕ್ರಿಯಾ ಅಭಿಯಾನ ಯೋಜನೆಯಡಿ ಉಚಿತ ಶಸ್ತ್ರಚಿಕಿತ್ಸೆಗಳನ್ನು ಏರ್ಪಡಿಸಲಾಗಿದೆ. ಶಿಶುಗಳ ಸಹಿತ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಅವಶ್ಯವಿರುವ ಪೋಷಕರು ತಾ. 20 ರೊಳಗೆ ಆಸ್ಪತ್ರೆಯಲ್ಲಿ ಸಂಪರ್ಕಿಸಬೇಕು. ಫೆಬ್ರವರಿ 3 ರಿಂದ ಅಮೇರಿಕಾದ ತಜ್ಞ ವೈದ್ಯರು ಉಚಿತ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7022078002, 9108529022 ರಲ್ಲಿ ಅಥವಾ 8971957575ಗೆ ಸಂಪರ್ಕಿಸಬಹುದು. ಅನ್ನನಾಳ, ಮಲದ್ವಾರ, ಮೂತ್ರಕೋಶ, ಎಲುಬು, ಮೂಳೆ ಸಹಿತ ಯಾವದೇ ಸಮಸ್ಯೆಗಳಿಗೆ ಸಂಪರ್ಕಿಸಿ ಪ್ರಯೋಜನ ಪಡೆಯಬಹುದು ಎಂದು ಕೆಎಂಸಿ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.