ಮಡಿಕೇರಿ ಜ.8 :ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಅತಿವೃಷ್ಟಿ ಯಿಂದ ಅಪಾರ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕಾಗಿ ಕೈಜೋಡಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು, ಸುಮಾರು 2106 ಕುಟುಂಬಗಳಿಗೆ 8 ಕೋಟಿ ರೂ.ಗಳನ್ನು ವಿತರಿಸಲು ತಾ.10 ರಂದು ಮಡಿಕೇರಿಗೆ ಆಗಮಿಸುತ್ತಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ಬೃಹತ್ ಸಮಾರಂಭ ನಡೆಯಲಿದ್ದು, ವೀರೇಂದ್ರ ಹೆಗ್ಗಡೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಅಲ್ಲಿಯೇ ಪರಿಹಾರ ಧನವನ್ನು ವಿತರಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯ ಕ್ರಮದ ಕುರಿತು ಮಾಹಿತಿ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಕರಾವಳಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ಕೆ. ಮಹಾವೀರ ಅಜ್ರಿ, ಶ್ರೀ ಕ್ಷೇತ್ರ ಧರ್ಮಸ್ಥಳವು ಘೋಷಿಸಿರುವ 10 ಕೋಟಿ ನೆರವಿನಲ್ಲಿ 2 ಕೋಟಿ ರೂ.ಗಳನ್ನು ಈಗಾಗÀಲೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡ ಲಾಗಿದೆ. ಉಳಿದ 8 ಕೋಟಿ ರೂ. ಗಳನ್ನು 2106 ಕುಟುಂಬಗಳಿಗೆ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರೇ ವಿತರಿಸಲಿದ್ದಾರೆ ಎಂದರು.

ಅತಿವೃಷ್ಟಿಯಿಂದ ಮನೆ ಮತ್ತು ಕೃಷಿ, ಕೃಷಿ ಜಮೀನು ಕಳೆದುಕೊಂಡ ಕುಟುಂಬಗಳಿಗೆ

(ಮೊದಲ ಪುಟದಿಂದ) ಪರಿಹಾರ ವಿತರಣೆಯಾಗಲಿದೆ. ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಲು 15 ಸಾವಿರ ರೂ., ಮನೆ ದುರಸ್ತಿಗಾಗಿ 25 ಸಾವಿರ ರೂ., ಕೃಷಿ ಕ್ಷೇತ್ರದ ಪುನರ್ ನಿರ್ಮಾಣಕ್ಕಾಗಿ 25 ಸಾವಿರ ರೂ.ಗಳಂತೆ ತಾ.10 ರಂದು ನಡೆಯುವ ಕಾರ್ಯಕ್ರಮದಲ್ಲಿ ಪರಿಹಾರ ಧನವನ್ನು ನೀಡಲಾಗುವದೆಂದು ತಿಳಿಸಿದರು.

ಡಾ. ವೀರೇಂದ್ರ ಹೆಗ್ಗಡೆಯವರು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುವ ಸಮಾಲೋಚನಾ ಸಭೆಯಲ್ಲಿ ಪರಿಹಾರ ಧನ ವಿತರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ಪಿರಿಯಾಪಟ್ಟಣ ಶಾಸಕ ಕೆ. ಮಹಾದೇವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಹೆಚ್. ಮಂಜುನಾಥ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ,

ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಮಡಿಕೇರಿ ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಕುಮಾರ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಐಡಿಬಿಐ ಬ್ಯಾಂಕ್‍ನ ಸಹಾಯಕ ಪ್ರಧಾನ ವ್ಯವಸ್ಥಾಪಕÀ ಎಸ್. ರಾಮಸ್ವಾಮಿ ಪಾಲ್ಗೊಳ್ಳಲಿ ದ್ದಾರೆ ಎಂದು ಮಹಾವೀರ ಅಜ್ರಿ ಮಾಹಿತಿ ನೀಡಿದರು.

ಆರ್ಥಿಕ ವಿರಾಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಲ ಪಡೆದ, ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಸದಸ್ಯರುಗಳಿಗೆ ಸಾಲ ಮರು ಪಾವತಿಸಲು 3 ತಿಂಗಳ ಆರ್ಥಿಕ ವಿರಾಮವನ್ನು ನೀಡಲಾಗಿತ್ತು. ಇದೀಗ ಸಂತ್ರಸ್ತರ ಆರ್ಥಿಕ ಸ್ಥಿತಿಗತಿಯನ್ನು ನೋಡಿಕೊಂಡು ಸಾಲ ಸಂಗ್ರಹಿಸಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಎ. ಯೋಗೀಶ್ ತಿಳಿಸಿದರು.

ಕೊಡಗು ಜಿಲ್ಲೆಯ ಮೂರು ತಾಲೂಕುಗಳು ಮತ್ತು ಪಿರಿ ಯಾಪಟ್ಟಣ ಹಾಗೂ ಅರಕಲಗೂಡು ತಾಲೂಕುಗಳು ಸೇರಿ ಈ ಘಟಕದಲ್ಲಿ 10,500 ಸಂಘಗಳಿದ್ದು, 1 ಲಕ್ಷಕ್ಕೂ ಅಧಿಕ ಸದಸ್ಯರುಗಳಿದ್ದಾರೆ. ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ಸಾಲ ಮರುಪಾವತಿ ಕಷ್ಟವಾಗುವದರಿಂದ 6 ತಿಂಗಳ ಕಾಲಾವಕಾಶವನ್ನು ನೀಡಲಾಗುತ್ತಿದೆ ಎಂದರು. ಯೋಜನೆಯ ಮೂಲಕ 5 ತಾಲೂಕುಗಳಲ್ಲಿ ಒಟ್ಟು 267 ಕೋಟಿ ರೂ. ಸಾಲ ಸಂಗ್ರಹವಾಗ ಬೇಕಾಗಿದೆ ಎಂದರು. ಸಂತ್ರಸ್ತರಿಗೆ ಮೊದಲು ನೆಲೆ ಕಲ್ಪಿಸಿ ನಂತರ ಕೃಷಿಗೆ ಪೂರಕವಾದ ಸಹಕಾರವನ್ನು ನೀಡಲಾಗುವದೆಂದು ಯೋಗೀಶ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಯೋಜನೆಯ ಧರ್ಮಸ್ಥಳದ ಕೇಂದ್ರ್ರ ಕಛೇರಿ ನಿರ್ದೇಶಕ ಕೇಶವ ಗೌಡ, ಯೋಜನಾಧಿಕಾರಿ ವೈ. ಪ್ರಕಾಶ್, ಮಡಿಕೆÉೀರಿ ಮೇಲ್ವಿಚಾರಕ ಹೆಚ್.ಮುಕುಂದ ಮತ್ತು ಕುಶಾಲನಗರದ ಮೇಲ್ವಿಚಾರಕ ಕೆ. ಹರೀಶ್ ಉಪಸ್ಥಿತರಿದ್ದರು.