ಗೋಣಿಕೊಪ್ಪಲು, ಜ.7: ಗೋಣಿಕೊಪ್ಪಲುವಿನ ದಅವಾ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ‘ಮನೋವಿಜ್ಞಾನ ತರಬೇತಿ’ ಹಾಗೂ ‘ಕಥಾ ಪ್ರಸಂಗ’ ನಡೆಯಿತು. ಗೋಣಿಕೊಪ್ಪಲುವಿನ ಜುಮಾ ಮಸೀದಿ ಸಮೀಪದ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು.
ದಅವಾ ಫ್ರೆಂಡ್ಸ್ ಅಸೋಸಿ ಯೇಶನ್ ಅಧ್ಯಕ್ಷ ಬಿ.ಎಂ. ಅಶ್ರಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮನೋವಿಜ್ಞಾನ ತರಬೇತಿಯನ್ನು ಕಣ್ಣೂರಿನ ಸಜೀಉ ರಹಮಾನ್ ಹಾಗೂ ಕಥಾ ಪ್ರಸಂಗವನ್ನು ತೋಟಿಕ್ಕಲ್ನ ಝುಬೈರ್ ಮಾಸ್ಟರ್ ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೊನ್ನಂಪೇಟೆ ಶಾರದಾಶ್ರಮದ ಅಧ್ಯಕ್ಷರಾದ ಬೋಧ ಸ್ವರೂಪ ನಂದಾಜಿ ಮಹರಾಜ್, ಮಾತನಾಡಿ ಭಾರತ ದೇಶದಲ್ಲಿ ವಿವಿಧ ಧರ್ಮದವರಿದ್ದಾರೆ. ಎಲ್ಲ ಧರ್ಮ ಶಾಂತಿಯನ್ನು ಬಯಸುತ್ತದೆ. ಸರ್ವಧರ್ಮಿಯರನ್ನು ಒಂದೇ ವೇದಿಕೆಯಡಿ ತರುವ ಮೂಲಕ ಶಾಂತಿ ಸಹಭಾಳ್ವೆಗೆ ಎಲ್ಲ ರೀತಿಯಿಂದಲೂ ಕೆಲಸವಾಗಬೇಕು ಎಂದರು.
ಪೊನ್ನಂಪೇಟೆ ಸಾಯಿ ಶಂಕರ್ ಟ್ರಸ್ಟ್ನ ಅಧ್ಯಕ್ಷರಾದ ಝರು ಗಣಪತಿ ಮಾತನಾಡಿ ಜೀವನದಲ್ಲಿ ಸತ್ಯ ಧರ್ಮದಿಂದ ನಡೆಯಬೇಕು. ಪ್ರತಿಯೊಬ್ಬರನ್ನು ಪ್ರೀತಿಸುವ ಗುಣ ಹೊಂದಿರಬೇಕು. ಭವ್ಯ ಭಾರತ ಕಟ್ಟಲು ಎಲ್ಲರ ಸಹಕಾರ ಅವಶ್ಯವಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪೊನ್ನಂಪೇಟೆ ಸಾಯಿ ಶಂಕರ್ ಟ್ರಸ್ಟ್ನ ಅಧ್ಯಕ್ಷರಾದ ಝರು ಗಣಪತಿ, ಪೊನ್ನಂಪೇಟೆ ಶಾರದಾಶ್ರಮದ ಅಧ್ಯಕ್ಷರಾದ ಬೋಧ ಸ್ವರೂಪ ನಂದಾಜಿ ಮಹರಾಜ್,ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್ ನಿವೃತ್ತ ದೈಹಿಕ ಶಿಕ್ಷಕರಾದ ಕಾಡ್ಯಮಾಡ ದೇವಯ್ಯ, ಸಮಾಜ ಸೇವಕರಾದ ಎಂ.ಕೆ.ಅಬೂಟಿ, ಉಂಬೈ, ಪತ್ರಕರ್ತರಾದ ಹೆಚ್.ಕೆ.ಜಗದೀಶ್, ಗೋಣಿಕೊಪ್ಪ ಶಾಫಿ ಜುಮಾ ಮಸೀದಿಯ ಖತೀಬರಾದ ಮುಹಮ್ಮದಲಿ ಫೈಝಿ, ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್, ಸೆಂಥೋಮಸ್ ಶಾಲೆಯ ಆಡಳಿತ ಅಧಿಕಾರಿ ಫಾದರ್ ಆ್ಯಂಥೋಣಿ, ಇವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶಾಫಿ ಜಮಾಹತ್ನ ಅಧ್ಯಕ್ಷರಾದ ಸಿ.ಪಿ.ಎಂ. ಬಶೀರ್, ನೂರುಲ್ ಹುದ ಮದ್ರಸ ಪ್ರಾಧ್ಯಾಪಕರಾದ ಅಬ್ದುಲ್ ರೆಹಮಾನ್ ಮುಸ್ಲಿಯಾರ್,ಗ್ರಾಮ ಪಂಚಾಯಿತಿ ಬಿ.ಎನ್. ಪ್ರಕಾಶ್, ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ನ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಬಾಪು, ಅನಾಫಿ ಜಾಮಿಯ ಮಸೀದಿಯ ಅಧ್ಯಕ್ಷರಾದ ಆಸಿಪ್ ಮುನೀಬ್ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ವಿ.ರಫೀಕ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಟಿ ಕಾರ್ಯದರ್ಶಿ ಫೈಝಲ್, ಖಜಾಂಚಿ ಷಂಶುದ್ದೀನ್, ಅನಾಫಿ ಜಾಮಿಯ ಮಸೀದಿಯ ಅಧ್ಯಕ್ಷರಾದ ಆಸಿಪ್ ಮುನೀಬ್, ಉಪಾಧ್ಯಕ್ಷರಾದ ಆಶ್ರಫ್, ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ಆಸೀಫ್ರವರು ಸ್ವಾಗತಿಸಿದರು. ವಕೀಲರಾದ ಶಮೀರ್ ವಂದಿಸಿದರು.