ಮಡಿಕೇರಿ, ಜ. 8: ಕೊಡಗು ಐರಿ ಸಮಾಜ ಮತ್ತು ಮುಲೈರೀರ ಮನೆಯವರ ಜಂಟಿ ಆಯೋಜನೆಯೊಂದಿಗೆ 2019ನೇ ಸಾಲಿನಲ್ಲಿ ಮುಲೈರೀರ ಕಪ್ ಕ್ರಿಕೆಟ್ 2019 ನಡೆಸಬೇಕಿತ್ತು. ಆದರೆ ಕಳೆದ ಮಳೆಗಾಲದಲ್ಲಿ ಕೊಡಗಿನಲ್ಲಿ ಆದ ಪ್ರಕೃತಿ ವಿಕೋಪದ ಕಾರಣ ಸಾಕಷ್ಟು ಕಷ್ಟನಷ್ಟಗಳು ಸಂಭವಿಸಿರುವದರಿಂದ ಪ್ರಸಕ್ತ ಸಾಲಿನಲ್ಲಿ ನಡೆಸಬೇಕಿರುವ ಮುಲೈರೀರ ಕಪ್ ಕ್ರಿಕೆಟ್ 2019 ಅನ್ನು ಕೈಬಿಡಲಾಗಿದೆ. ಇದೇ ಪಂದ್ಯಾವಳಿಯನ್ನು ಮುಂದಿನ ವರ್ಷ ಅಂದರೆ 2020 ರಲ್ಲಿ ನಡೆಸಲು ಮುಲೈರೀರ ಕುಟುಂಬವು ಕೊಡವ ಐರಿ ಸಮಾಜದೊಂದಿಗೆ ಸಮಾಲೋಚಿಸಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಮಾನವೀಯತೆಯ ದೃಷ್ಟಿಯಿಂದ ಕೊಡಗಿನ ಸಂತ್ರಸ್ತರ ಭಾವನೆಗಳಿಗೆ ಬೆಲೆ ಕೊಡುವ ಸಲುವಾಗಿ ಪಂದ್ಯಾವಳಿಯನ್ನು ಕೈಬಿಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.