ಸಂಪಾಜೆ, ಜ. 6: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌಡರ ಯುವ ಸೇವಾ ಸಂಘ ಸುಳ್ಯ ವತಿಯಿಂದ ಜಾಲ್ಸೂರಿನಲ್ಲಿ ನಡೆದ ಅರೆಭಾಷೆ ಗಮ್ಮತ್ತು ಕಾರ್ಯಕ್ರಮದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಅರೆಭಾಸೆ ಸಂಸ್ಕೃತಿ ಮತ್ತೆ ಸಾಹಿತ್ಯ ಬೆಳವಣಿಗೆಲಿ ಯುವಜನರ ಪಾತ್ರ’ ಎಂಬ ವಿಷಯದ ಅರೆಭಾಷೆ ಪ್ರಬಂಧ ಸ್ಪರ್ಧೆಯಲ್ಲಿ ಕುಂಬಳಚೇರಿಮನೆ ಭವಿತ್ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಪೆರಾಜೆ ಗ್ರಾಮದ ಕುಂಬಳಚೇರಿಮನೆ ಮುಕುಂದ ಮತ್ತು ಚಂದ್ರಮತಿ ದಂಪತಿಗಳ ಪುತ್ರ. ಪ್ರಸ್ತುತ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ.