ಗೋಣಿಕೊಪ್ಪಲು, ಜ. 6: ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಗೋಣಿಕೊಪ್ಪಲು ಮುಳಿಯ ಕೇಶವ ಭಟ್ ಅಂಡ್ ಸನ್ಸ್ ಸಹಯೋಗದೊಂದಿಗೆ ಹೊಸ ವರ್ಷಾಚರಣೆ ಮಾಡಲಾಯಿತು. ಈ ಸಂದರ್ಭ ಕಾವೇರಿ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಎ.ಎಂ. ಕಮಲಾಕ್ಷಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಳಿಯ ಜುವೆಲ್ಲರಿಯ 2019ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಹೊಸ ವರ್ಷ ವಿದ್ಯಾರ್ಥಿಗಳಲ್ಲಿ ಹೊಸ ಹರುಷವನ್ನು ತರಲಿ, ಎಲ್ಲರಿಗೂ ಈ ವರ್ಷ ಶುಭವನ್ನು ತರಲಿ ಎಂದು ಹಾರೈಸಿದರು. ವಿದ್ಯಾರ್ಥಿಗಳಿಗೆ ಮುಳಿಯ ಜುವೆಲ್ಲರಿಯವರು ಕೇಕ್ ಹಾಗೂ ಕ್ಯಾಲೆಂಡರ್ ವಿತರಿಸಿದರು. ಈ ಸಂದರ್ಭ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಮುಳಿಯ ಜ್ಯುವೆಲ್ಲರಿಯ ಮ್ಯಾನೇಜರ್ ಸೋಮಣ್ಣ ಹಾಗೂ ಸಿಬ್ಬಂದಿ ಸುಂದರೇಶ್, ಉಪನ್ಯಾಸಕಿ ಎಂ.ಕೆ. ಪದ್ಮ, ಡಾ. ರೇಖಾ ಚಿಣ್ಣಪ್ಪ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.ಬೇಗೂರು: ಬೇಗೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷಾಚರಣೆ ಮಾಡಲಾಯಿತು. ವಿದ್ಯಾರ್ಥಿಗಳು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕಿ ಸುಜಾತ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕೆ.ಯು. ದಮಯಂತಿ, ಶಿಕ್ಷಕಿಯರಾದ ಅನಿತಾ ಕುಮಾರಿ, ಸಫೂರ, ಮಹಿಳಾ ಸಂಘದ ಸದಸ್ಯೆ ಸುಶೀಲ, ಅಕ್ಷರ ದಾಸೋಹ ಸಿಬ್ಬಂದಿ ಕೆ.ಜಿ. ದೇವಮ್ಮ ಇದ್ದರು.