ನಾಪೆÉÇೀಕ್ಲು, ಜ. 6: ಸಮೀಪದ ಹೊದವಾಡ ಗ್ರಾಮದ ರಾಫೇಲ್ಸ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಂದರ್ ಮಾತನಾಡಿ, ಕಾಲೇಜು ಮೆಟ್ಟಿಲೇರಿದ ಕೂಡಲೇ ಮಕ್ಕಳಲ್ಲಿ ಸ್ವಾಭಾವಿಕವಾಗಿ ಕೆಟ್ಟ ಚಟದತ್ತಾ ಮನಸ್ಸು ಬದಲಾವಣೆ ಗೊಳ್ಳುವದು ಸಹಜ.

ಇದು ಶರೀರ ಕ್ರಿಯೆಯಲ್ಲಿ ಆಗುವ ಮಾರ್ಪಾಡು. ಈ ಕಾಲಘಟ್ಟದಲ್ಲಿ ಮಕ್ಕಳು ತಂಬಾಕು ಪದಾರ್ಥಗಳು, ಮತ್ತಿತರ ಮಾದಕ ಪದಾರ್ಥಗಳ ದಾಸರಾಗುತ್ತಿರುವದು ಕಂಡುಬರುತ್ತಿದೆ. ಇಂತಹ ಸಮಯದಲ್ಲಿ ಮಕ್ಕಳನ್ನು ಜಾಗೃತರಾಗಿಸುವದಕ್ಕೆ ಮುಖ್ಯವಾಗಿ ಪ್ರಯತ್ನಿಸಬೇಕು.

ಅವರ ಚಲನ ವಲನವನ್ನು ಗಮನಿಸಿ ಇಂತಹ ಚಟಕ್ಕೆ ಬಲಿಯಾಗದಂತೆ ನೋಡಿ ಕೊಳ್ಳಬೇಕಾಗಿದೆ ಎಂದ ಅವರು ಇದು ಶಿಕ್ಷಕ ಮತ್ತು ಪೆÇೀಷಕರಿಂದ ಮಾತ್ರ ಸಾಧ್ಯ ಎಂದರು.

ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಮಾತನಾಡಿ, ಮಾದಕ ಪದಾರ್ಥಗಳು ಮಾನವನ ದೇಹದಲ್ಲಿ ಸೇರಿಕೊಂಡರೆ ಅಪಾಯ ತಪ್ಪಿದಲ್ಲ. ಈ ಪ್ರಕ್ರಿಯೆ ಕಾಲೇಜು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಆದುದರಿಂದ ವಿದ್ಯಾರ್ಥಿಗಳು ಇದರ ದಾಸರಾಗಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಫೆಲ್ಸ್ ಇಂಟರ್ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಸಿ.ಎ. ಮುಜೀಬ್ ವಹಿಸಿದ್ದರು. ವೇದಿಕೆಯಲ್ಲಿ ಹರಿಹರ, ಮತ್ತಿತರರು ಇದ್ದರು.