ಮಡಿಕೇರಿ, ಜ. 6: ಪ್ರತಿಷ್ಠಿತ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ತಾ. 12 ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಗುಂಪಿನಲ್ಲಿ ಪ್ರಸಕ್ತ ಆಡಳಿತ ನಡೆಸುತ್ತಿರುವ ಅಧ್ಯಕ್ಷ ಬಿ.ಕೆ. ಜಗದೀಶ್ ಹಾಗೂ ಉಪಾಧ್ಯಕ್ಷ ಎಸ್.ಸಿ. ಸತೀಶ್ ನೇತೃತ್ವದ ತಂಡ ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಶತಪ್ರಯತ್ನ ನಡೆಸುತ್ತಿದೆ.ಈ ತಂಡದಲ್ಲಿ ಕ್ರಮವಾಗಿ ಸಾಮಾನ್ಯ ಕ್ಷೇತ್ರದಿಂದ ಬಿ.ಕೆ. ಜಗದೀಶ್, ಕನ್ನಂಡ ಸಂಪತ್, ಡಿ.ಎನ್. ಅನಿಲ್‍ಕುಮಾರ್, ಆರ್. ಗಿರೀಶ್, ಬಿ.ವಿ. ರೋಷನ್, ಮನು ಮಂಜುನಾಥ್, ಎಸ್.ಟಿ. ದೇವರಾಜ್ ಸ್ಪರ್ಧೆಯಲ್ಲಿದ್ದಾರೆ. ಎರಡು ಮಹಿಳಾ ಸ್ಥಾನಗಳಿಗೆ ಭಾರತಿ ರಮೇಶ್ ಹಾಗೂ ಐ.ಜಿ. ಶಿವಕುಮಾರಿ ಕಣದಲ್ಲಿದ್ದಾರೆ. ಹಿಂದುಳಿದ ವರ್ಗದ 2 ಸ್ಥಾನಗಳಿಗೆ ಸಿ.ಕೆ. ಬಾಲಕೃಷ್ಣ ಹಾಗೂ ಬಿ.ಎಂ. ರಾಜೇಶ್ ಮತ್ತು ಪರಿಶಿಷ್ಟ ಜನಾಂಗದಿಂದ ಎಸ್.ಸಿ. ಸತೀಶ್, ಪರಿಶಿಷ್ಟ ಪಂಗಡದಿಂದ ಕೆ.ಆರ್. ನಾಗೇಶ್ ಸ್ಪರ್ಧಿಸಿದ್ದಾರೆ.ಪ್ರತಿಯಾಗಿ ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಸೇರಿದಂತೆ ಮಿಕ್ಕೆಲ್ಲರು ಒಗ್ಗೂಡಿ ಪ್ರತಿ ಸ್ಪರ್ಧೆಯಲ್ಲಿದ್ದಾರೆ. ಈ ಕೂಟದಿಂದ ಎಂ.ಪಿ. ಮುತ್ತಪ್ಪ, ಕೋಡಿ ಚಂದ್ರಶೇಖರ್, ರಾಜೇಶ್ ಯಲ್ಲಪ್ಪ, ಜಿ.ಎಂ. ಸತೀಶ್ ಪೈ, ಅಂಬೆಕಲ್ ನವೀನ್, ಕೆ.ಯು. ಅಶ್ರಫ್, ಟಿ.ಎಚ್. ಉದಯಕುಮಾರ್, ಕಾವೇರಮ್ಮ ಸೋಮಣ್ಣ, ಈಶ್ವರಿ ಮಾಚಯ್ಯ, ಬಿ.ಪಿ. ಗುರುಕಿರಣ್, ಡಾಲು ಉಮೇಶ್, ಎಂ.ಎಂ. ಧರ್ಮವತಿ ಹಾಗೂ ಎಚ್.ಎಸ್. ಪ್ರೇಮ್‍ಕುಮಾರ್ ಕಣದಲ್ಲಿದ್ದಾರೆ.ಈ ಎರಡು ತಂಡಗಳ ಹೊರತುಪಡಿಸಿದಂತೆ ಸಾಮಾನ್ಯ ಸ್ಥಾನಗಳಿಗೆ ಕೆ.ಯು. ಅಬ್ದುಲ್ ಸಲಾಂ, ಎಂ.ಪಿ. ಕೃಷ್ಣರಾಜು, ಎಂ. ಖಲೀಲ್, ವಿ.ಜಿ. ಮೋಹನ್, ಕೆ. ರಾಜು ಹಾಗೂ ಮಹಿಳಾ ಸ್ಥಾನಕ್ಕೆ ಬೆನ್ನಿ ಜೆಸಿಂತ ಡಿಸಿಲ್ವಾ ಎಂಬವರು ಪ್ರತ್ಯೇಕವಾಗಿ ಕಣದಲ್ಲಿದ್ದಾರೆ. ಹೀಗೆ ಒಟ್ಟು 13 ಸ್ಥಾನಗಳಿಗೆ ಇಂದು ಅಂತಿಮವಾಗಿ 32 ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ದಿನಗಳು ಉರುಳಿದಂತೆ ಟೌನ್ ಬ್ಯಾಂಕ್ ಚುನಾವಣೆಯು ರಂಗೇರತೊಡಗಿದ್ದು, ಉಭಯ ತಂಡಗಳ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಓಲೈಕೆಯಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ತಾ. 12 ರಂದು ಮತದಾನದೊಂದಿಗೆ ಬ್ಯಾಂಕಿನ ನೂತನ ಆಡಳಿತ ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ.