ಮಡಿಕೇರಿ, ಜ. 7: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಡೆಸಿದ 2018ರ ನೀಟ್ ಪರೀಕ್ಷೆಯಲ್ಲಿ ಕೊಡಗಿನ ದಂಬೆಕೋಡಿ ರಾಜೇಶ್ವರಿ ಚಂಗಪ್ಪ ತೇರ್ಗಡೆ ಹೊಂದಿದ್ದಾರೆ.
ದೇಶಾದ್ಯಂತ ಒಟ್ಟು 16 ಸಾವಿರಕ್ಕೂ ಅಧಿಕ ಮಂದಿ ಪರೀಕ್ಷೆ ಬರೆದಿದ್ದು, 800 ಮಂದಿ ಮಾತ್ರ ತೇರ್ಗಡೆ ಹೊಂದಿದ್ದಾರೆ.
ಈ ಪೈಕಿ ಸೈಕಾಲಜಿಯಲ್ಲಿ ಪರೀಕ್ಷೆ ಬರೆದಿರುವ ರಾಜೇಶ್ವರಿ ಕೂಡ ಒಬ್ಬರಾಗಿದ್ದಾರೆ. ಬೆಂಗಳೂರಿನ ಮಹಾವೀರ ಜೈನ್ ಕಾಲೇಜಿನಲ್ಲಿ ಎಂಫಿಲ್ ಮುಗಿಸಿರುವ ರಾಜೇಶ್ವರಿ ಮಡಿಕೇರಿ ತಾಲೂಕಿನ ಕುಂಬಳದಾಳು ಗ್ರಾಮದ ದಂಬೆಕೋಡಿ ಚಂಗಪ್ಪ ಹಾಗೂ ಶಾಂತಿ ಚಂಗಪ್ಪ ಅವರ ಪುತ್ರಿ.