ಕೂಡಿಗೆ, ಜ. 5: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ವತಿಯಿಂದ ನಡೆಸಲಾದ ಸ್ವಾಸ್ಥ್ಶ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಾಜಿ ಸೈನಿಕ ಸುಭೇದರ್ ಮೇಜರ್ ತಿಮ್ಮಯ್ಯ ಅವರು ಮಾತನಾಡಿ, ಕಾಲೇಜು ಶಿಕ್ಷಣವನ್ನು ಕಲಿಯುತ್ತಿರುವ ಮಕ್ಕಳು ಉತ್ತಮ ಗುಣಗಳನ್ನು ರೂಢಿಸಿ ಕೊಂಡಾಗ ಹೆತ್ತವರಿಗೆ ಮಕ್ಕಳೇ ಆಸ್ತಿಯಾಗಿರುತ್ತಾರೆ. ದುಶ್ಚಟಗಳನ್ನು ಅಳವಡಿಸಿಕೊಂಡ ಪ್ರತೀ ವ್ಯಕ್ತಿಯೂ ಸಮಾಜಕ್ಕೆ ಕಂಟಕ ವಾಗುತ್ತಾನೆ ಹಾಗೂ ದೈಹಿಕ, ಮಾನಸಿಕ, ಆರ್ಥಿಕ ವಾಗಿ ಅಶ್ವಸ್ತನಾಗಿ ಕುಟುಂಬಕ್ಕೂ ಹೊರೆಯಾಗುತ್ತಾನೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ. ನಾಗರಾಜ್ ಶೆಟ್ಟಿ ಮಾತನಾಡಿ, ಶಿಕ್ಷಣವನ್ನು ಶಿಕ್ಷಕರನ್ನು ಪ್ರೀತಿಸುವ ಪ್ರತೀಯೊಬ್ಬ ವ್ಶಕ್ತಿಯೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ವನ್ನು ಪಡೆಯಲು ಸಾಧ್ಯವಾಗುತ್ತದೆ. ಧರ್ಮಸ್ಥಳ ಯೋಜನೆಯ ಮೂಲಕ ನಡೆಸಲ್ಪಡುವ ಸ್ವಾಸ್ಥ್ಶ ಸಂಕಲ್ಪ ಕಾರ್ಯಕ್ರಮದಲ್ಲಿ ನೀಡಿದ ಮಾಹಿತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡಿಗೆ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಯೋಜನೆಯ ಮೂಲಕ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾರ್ಗದರ್ಶನದಂತೆ ನಡೆದುಕೊಂಡರೆ ಶಿಕ್ಷಣ ಸಂಸ್ಥೆಗೆ ಗೌರವ ತರಲು ಸಾಧ್ಯ ಹಾಗೂ ಕಾಲೇಜು ಶಿಕ್ಷಣ ಮುಗಿಸಿ ವೃತ್ತಿಪರ ಶಿಕ್ಷಣ ಮಾಡಬಯಸುವ ವಿದ್ಯಾರ್ಥಿ ಗಳ ಹೆತ್ತವರು ಧರ್ಮಸ್ಥಳ ಯೋಜ ನೆಯ ಸಂಘದ ಸದಸ್ಯರಾಗಿದ್ದಲ್ಲಿ ಸುಜ್ಞಾನನಿಧಿ ಶಿಷ್ಯ ವೇತನವನ್ನು ಪಡೆಯಲು ಅವಕಾಶವಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜು ಮುಖ್ಯಸ್ಥ ನಾಗಪ್ಪ ಹಾಗೂ ಉಪನ್ಯಾಸಕ ರಮೇಶ್ ಯಂ.ಟಿ., ಹನುಮರಾಜ್, ಸೂಸಿ ತಂಗಚನ್ ಮತ್ತು ಗೌತಮಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೂಡುಮಂಗಳೂರು ಸೇವಾಪ್ರತಿನಿಧಿ ನಿರ್ಮಲಾ ಕಾರ್ಯಕ್ರಮ ನಿರ್ವಹಿಸಿದರು.