ಮಡಿಕೇರಿ, ಜ. 5: ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗಖಾತ್ರಿಗೆ ಪೂರಕವಾಗಿ ‘ಕುಲಶಾಸ್ತ್ರ ಅಧ್ಯಯನ’ ನಡೆಸಲು ಸಿ.ಎನ್.ಸಿ.ಯ ಸತತ ಪ್ರಯತ್ನದಿಂದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಕುಲಶಾಸ್ತ್ರ ಅಧ್ಯಯನಕ್ಕೆ ಅಧಿಕೃತ ಆದೇಶ ನೀಡಿದೆ. ದೈವಿ ಕೃಪೆಯಿಂದಾಗಿ ಈ ಕಾರ್ಯ ಸಾಧ್ಯವಾದ ಹಿನ್ನೆಲೆಯಲ್ಲಿ ಸಿ.ಎನ್.ಸಿ. ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಶ್ರೀ ಪಾಡಿ ಇಗ್ಗುತಪ್ಪ ದೇವನೆಲೆಯಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ದೀಪಾಲಂಕಾರ ಪೂಜೆ ಮತ್ತು ಪ್ರಾರ್ಥನೆ ನೆವೇರಿಸಲಾಯಿತು ಪ್ರಧಾನ ಆರ್ಚಕ ಕುಶಭಟ್ ಪೂಜೆ ನೆರವೇರಿಸಿದರು.
ಪೂಜೆ ಮತ್ತು ಪ್ರಾರ್ಥನೆಯಲ್ಲಿ ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಮದ್ರೀರ ಕರುಂಬಯ್ಯ, ಕಾಂಡೆರ ಸುರೇಶ್, ಅರೆಯಡ ಗಿರೀಶ್, ಅಪ್ಪಾರಂಡ ಪ್ರಕಾಶ್, ಶ್ರೀನಿವಾಸ್, ನಂದಿನಿ ನಂಜಪ್ಪ, ಚಂಬಂಡ ಜನತ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಪಾರ್ವಂಗಡ ನವೀನ್, ಮಾಚಿಮಾಡ ಲವ ಗಣಪತಿ, ಬಾಚಮಂಡ ಬೆಲ್ಲು, ಕಾಟುಮಣಿಯಂಡ ಉಮೇಶ್, ಗೀತ ಮತ್ತು ಮುತ್ತಪ್ಪ ಭಾಗವಹಿಸಿದ್ದರು.