ಮಡಿಕೇರಿ, ಜ. 5 : ವ್ಯಕ್ತಿ ಯೋರ್ವರು ನಾಪತ್ತೆಯಾಗಿರುವ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲಿನ ಷಣ್ಮುಖಯ್ಯ ಎಂಬವರು ಡಿ. 30ರಂದು ಮನೆಯಿಂದ ತೆರಳಿದವರು ಹಿಂತಿರುಗಿಲ್ಲ ಎಂದು ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣ : ಇದೇ ಠಾಣಾ ವ್ಯಾಪ್ತಿಯ ನಿವಾಸಿ ಚೇತನ್ ಎಂಬವರು ಡಿ. 12ರಂದು ನಾಪತ್ತೆ ಯಾಗಿರುವ ಕುರಿತು ಮತ್ತೊಂದು ದೂರು ದಾಖಲಾಗಿದೆ. ಇವರುಗಳ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಗೆ ತಿಳಿಸುವಂತೆ ಪ್ರಕಟಣೆ ಕೋರಿದೆ.