ಮಡಿಕೇರಿ, ಜ. 5: ಶಿಕ್ಷಣ ಸಂಸ್ಥೆಗಳಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳೊಂದಿಗೆ, ಕೊಡಗಿನ ವಿದ್ಯಾರ್ಥಿಗಳು ತಮ್ಮ ಸಾಧನೆ ತೋರಿದ್ದಾರೆ. ವಿದ್ಯಾಲಯಗಳ ವಾರ್ಷಿಕೋತ್ಸವ, ಕ್ರೀಡಾ ಚಟುವಟಿಕೆ ಇತ್ಯಾದಿಯಲ್ಲಿ ಮಕ್ಕಳು ತೊಡಗಿಸಿಕೊಂಡಿದ್ದರು.ನಾಪೋಕ್ಲು: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿ ಕೊಳ್ಳುವದರಿಂದ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿ ಕೊಳ್ಳಬಹುದು ಎಂದು ನಿವೃತ್ತ ಪ್ರಾಂಶುಪಾಲ ಕೆ.ಎಂ. ಪೂಣಚ್ಚ ಹೇಳಿದರು.

ಬೇತು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಪೋಕ್ಲುವಿನ ವೈದ್ಯ ಡಾ. ಸಣ್ಣುವಂಡ ಕಾವೇರಪ್ಪ, ಖಜಾನಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದು ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಕಾವೇರಿ ಪ್ರಕಾಶ್ ವಹಿಸಿದ್ದರು. ಮುದ್ದಪ್ಪ ಸ್ವಾಗತಿಸಿ, ಮಮತ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ರಂಗಸ್ವಾಮಿ ವಂದಿಸಿದರು.ಗೋಣಿಕೊಪ್ಪ ವರದಿ: ಆಂಧÀ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವ ವಿದ್ಯಾಲಯದ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ತಂಡದಲ್ಲಿ ಪಾಲ್ಗೊಂಡಿದ್ದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಆರು ಕ್ರೀಡಾಪಟುಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಕ್ರೀಡಾಪಟುಗಳಾದ ಟಿ. ಎಸ್. ಮಧು, ಪಿ. ಕೆ. ಕಾರ್ಲ್ ಕಾರ್ಯಪ್ಪ, ಎ. ಎಂ. ಹೇಮಂತ್, ಪಿ. ಜೆ. ಪೃಥ್ವಿ, ಎಂ. ಡಿ. ದರ್ಶನ್, ಪಿ.ಯು. ಸೋಮಣ್ಣ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭ ಪ್ರಾಂಶುಪಾಲ ಪ್ರೊ. ಎಸ್. ಆರ್. ಉಷಾಲತ, ದೈಹಿಕ ಶಿಕ್ಷಣ ನಿರ್ದೇಶಕ ಎಂ. ಎನ್. ಚಿಟ್ಟಿಯಪ್ಪ ಹಾಗೂ ಎಂ.ಟಿ. ಸಂತೋಷ್ ಇದ್ದರು.

ಕೂಡಿಗೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ವತಿಯಿಂದ ಕೂಡಿಗೆ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮಿ ಪೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಆಡಳಿತ ಮಂಡಳಿಯ ಖಜಾಂಚಿ ಯಂ.ಬಿ. ಜಯಂತ್ ಮಾತನಾಡಿ, ಇಂತಹ ಕಾರ್ಯಕ್ರಮ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿ ಸುಭೇದರ್ ಮೇಜರ್ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಸದ್ಗುಣಗಳೊಂದಿಗೆ ಕಳೆದರೆ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಿದೆ ಎಂದರು.

ಧರ್ಮಸ್ಥಳ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ ಮಾತನಾಡಿದರು. ಕೂಡಿಗೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ಸಂಘಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆಯ ಪ್ರಬಾರ ಮುಖ್ಯೋಪಾಧ್ಯಾಯ ಎಸ್.ಎಸ್. ಶಿವಪ್ರಸಾದ್ ಸ್ವಾಗತಿಸಿದರು. ಕಲ್ಪನಾ ದಿನೇಶ್, ಸೇವಾಪ್ರತಿನಿಧಿ ಸುನಂದ, ಶಿಕ್ಷಕರಾದ ಸಿ.ಯಂ. ಸುಲೋಚನಾ, ಕುಸುಮಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಪುಷ್ಪಾ ಯಂ.ಪಿ. ನಿರ್ವಹಿಸಿದರು. ಶಿಕ್ಷಕ ಎ.ಪಿ. ಸೋಮಯ್ಯ ವಂದಿಸಿದರು.ಗೋಣಿಕೊಪ್ಪ: ಹೊಸ ವರ್ಷದ ಆಚರಣೆ ಎಂದರೆ ಮಕ್ಕಳು, ಗಂಡಸರು, ಹೆಂಗಸರು, ಹಿರಿಯರು-ಕಿರಿಯರು ಎಂಬ ಭೇದವಿಲ್ಲದೆ ಮಧ್ಯರಾತ್ರಿಯಿಂದ ಮುಂಜಾನೆಯವರೆಗೂ ಕುಡಿದು ಕುಪ್ಪಳಿಸುವ ಈ ದಿನದಲ್ಲಿ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ವಿಭಿನ್ನವಾಗಿ ಹೊಸ ವರ್ಷವನ್ನು ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಪ್ರತಿವರ್ಷ ವಿಭಿನ್ನವಾಗಿ ಹೊಸವರ್ಷವನ್ನು ಆಚರಿಸುವ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರು ಈ ಬಾರಿ ಪಾಲಿಬೆಟ್ಟದ ಚೆಷೈರ್ ಹೋಮ್ ಶಾಲೆಗೆ ತೆರಳಿ ಅಲ್ಲಿಯ ವಿದ್ಯಾರ್ಥಿಗಳೊಂದಿಗೆ ಸೇರಿ ಕೇಕ್ ಕಟ್ ಮಾಡಿಸಿ ಮನೋರಂಜನಾ ಕಾರ್ಯಕ್ರಮ ನೀಡುವ ಮೂಲಕ ವಿಭಿನ್ನ ವಾಗಿ ವರ್ಷಾಚರಣೆಯನ್ನು ನಡೆಸಲಾಯಿತು.

ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಹಾಡಿ, ಕುಣಿದು ಸಂಭ್ರಮಿಸಿದ ಸ್ವಯಂಸೇವಕರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು ನೃತ್ಯ, ನಾಟಕ ಪ್ರದರ್ಶನದೊಂದಿಗೆ ಶಿಕ್ಷಕಿಯರೂ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

ಈ ಸಂದರ್ಭ ಚೆಷೈರ್ ಹೋಮ್ ಶಾಲೆಯ ಅಧ್ಯಕ್ಷೆ ಗೀತಾ ಚಂಗಪ್ಪ, ಮುಖ್ಯೋಪಾಧ್ಯಾಯ ಶಿವರಾಜ್, ಎನ್.ಎಸ್.ಎಸ್. ಯೋಜನಾಧಿಕಾರಿ ಮಂದೆಯಂಡ ವನಿತ್‍ಕುಮಾರ್, ಎನ್.ಎಸ್.ಎಸ್. ಸ್ವಯಂಸೇವP-ಸೇವಕಿಯರು, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.