ಸೋಮವಾರಪೇಟೆ, ಜ.4: ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಯ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಂಗಳ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೋನಪ್ಪ ಅವರುಗಳು ಗೆಲವು ಸಾಧಿಸಿದ್ದಾರೆ.
ಕಳೆದ ತಾ. 2ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ತಾಲೂಕು ಕಚೇರಿಯಲ್ಲಿರುವ ಚುನಾವಣಾ ಶಾಖಾ ಕಚೇರಿಯಲ್ಲಿ ಬೆಳಿಗ್ಗೆ 8 ರಿಂದ ನಡೆದು 9 ಗಂಟೆಯ ವೇಳೆಗೆ ಫಲಿತಾಂಶ ಹೊರಬಿದ್ದಿತು.
ಈ ಹಿಂದೆ 1ನೇ ವಾರ್ಡ್ (ನಲ್ವತ್ತೇಕರೆ-ಬರಡಿ)ನ್ನು ಪ್ರತಿನಿಧಿಸುತ್ತಿದ್ದ ಬಾಪುಟ್ಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಈ ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೋನಪ್ಪ ಅವರು 273 ಮತಗಳಿಸುವ ಮೂಲಕ ಜಯಶಾಲಿಯಾದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಣಿ 250 ಹಾಗೂ ಕಾಂಗ್ರೆಸ್ ಬೆಂಬಲಿತ ಸಕೀರ್ 208 ಮತಗಳನ್ನು ಗಳಿಸಿ ಪರಾಭವಗೊಂಡರು.
3ನೇ ವಾರ್ಡ್(ಕುಂಬಾರಗುಂಡಿ)ನ್ನು ಪ್ರತಿನಿಧಿಸುತ್ತಿದ್ದ ಶ್ರುತಿ ಅವರು ಸರ್ಕಾರಿ ಉದ್ಯೋಗಿ ಆಗಿ ನೇಮಕಗೊಂಡ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಮಂಗಳ ಅವರು 362 ಮತಗಳನ್ನು ಗಳಿಸುವ ಮೂಲಕ ವಿಜಯಶಾಲಿಯಾದರು. ಇವರ ಎದುರಾಳಿ ಬಿಜೆಪಿಯ ಮಲ್ಲಿ ಅವರು 129 ಮತಗಳನ್ನು ಗಳಿಸಿ ಸೋಲನುಭವಿಸಿದರು.
1ನೇ ವಾರ್ಡ್‍ನಿಂದ 733 ಮತಗಳು ಚಲಾವಣೆಗೊಂಡಿದ್ದು, 2 ಮತಗಳು ತಿರಸ್ಕøತಗೊಂಡರೆ, 3ನೇ ವಾರ್ಡ್‍ನಿಂದ ಚಲಾವಣೆಯಾಗಿದ್ದ 496 ಮತಗಳ ಪೈಕಿ 5 ಮತಗಳು ತಿರಸ್ಕøತಗೊಂಡಿವೆ. ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ಹಾಗೂ ಚುನಾವಣಾಧಿಕಾರಿ ಹೆಚ್.ಬಿ. ಗಣೇಶ್ ಮತ್ತು ಸಿಬ್ಬಂದಿಗಳು ಮತ ಎಣಿಕೆ ಕಾರ್ಯ ನಡೆಸಿದರು.