ಸುಂಟಿಕೊಪ್ಪ,ಜ.4: ಗದ್ದೆಹಳ್ಳದ ಬಳಿ ವಾಹನವನ್ನು ಹಿಂದಿಕ್ಕುವ ಭರಾಟೆಯಲ್ಲಿ ಇನ್ನೋವಾ ಕಾರೊಂದು ಮುಂಭಾಗ ದಿಂದ ಆಗಮಿಸುತ್ತಿದ್ದ ದಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚÀಕ್ರದ ಸವಾರನ ಕಾಲು ಮುರಿತಗೊಂಡಿರುವ ಬಗ್ಗೆ ವರದಿಯಾಗಿದೆ.
ಮಡಿಕೇರಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು (ಕೆ.ಎ. 03 ಹೆಚ್ 4334) ಗದ್ದೆಹಳ್ಳದ ಸಮೀಪದ ಬಾಳೆಕಾಡು ತೋಟದ ಬಳಿಯಲ್ಲಿ ಲಾರಿಯನ್ನು ಹಿಂದಿಕ್ಕಲು ಮುಂದಾದ ಸಂದರ್ಭ ಮಡಿಕೇರಿ ಕಡೆಯಿಂದ ಸುಂಟಿಕೊಪ್ಪ ಕಡೆಗೆ ಆಗಮಿಸುತ್ತಿದ್ದ (ಕೆ.ಎ.45 3645) ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಬೈಕ್ ಸವಾರ ದೊಡ್ಡಹೊಸೂರಿನ ಶಫೀರ್ಗೆ ತೀವ್ರ ತರಹದ ಗಾಯಗಳಾಗಿ ಕಾಲುಮುರಿತಗೊಂಡಿದೆ. ಹಿಂಬದಿ ಸವಾರ ರಫೀಕ್ ಹಾಗೂ ಇನ್ನೋವಾ ಚಾಲಕ 7ನೇ ಹೊಸಕೋಟೆ ನಿವಾಸಿ ರಫೀಕ್ ಕೂಡ ಗಾಯಗೊಂಡು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.