ಮಡಿಕೇರಿ, ಜ. 4: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು ತಾ. 5 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಶ್ರೀ ಗುರುರಾಘವೇಂದ್ರ ಸಭಾಭವನ, ಜಾಲ್ಸೂರುವಿನಲ್ಲಿ ಅರೆಭಾಷೆ ವಿಚಾರ ಸಂಕಿರಣ ಕವಿಗೋಷ್ಠಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 11.00 ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಅರೆಭಾಷೆ ಸಾಹಿತ್ಯ ಸಂಸ್ಕೃತಿ ವಿಷಯದ ಬಗ್ಗೆ ಕೆ.ಆರ್.ವಿದ್ಯಾಧರ ಹಾಗೂ ಶಶಿಧರ ಮೋಂಟಡ್ಕ ವಿಚಾರ ಮಂಡನೆ ಮಾಡುವರು.

ಬೆಳಿಗ್ಗೆ 11.45 ಕ್ಕೆ ಸೋಬಾನೆ ಹೇಳುವದು, ರಸಪ್ರಶ್ನೆ, ಚೀಟಿ ಹೆರ್ಕಿ ಅಭಿನಯ ಬಗ್ಗೆ ಸಾರ್ವಜನಿಕ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ 3. ಗಂಟೆವರೆಗೆ ಅರೆಭಾಷೆ ಕವಿಗೋಷ್ಠಿ ನಡೆಯಲಿದೆ. 3 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.