ಗೋಣಿಕೊಪ್ಪ ವರದಿ, ಜ. 5 : ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ನರ್ಸರಿ ಕೆಲಸಗಾರ ಮತ್ತು ಅಣಬೆ ಕೃಷಿ ಕೌಶಲ್ಯ ತರಬೇತಿ ತಾ. 7 ರಿಂದ ಕೆವಿಕೆ ಆವರಣದಲ್ಲಿ ನಡೆಯಲಿದೆ.
18 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. 25 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಅಣಬೆ ಬೇಸಾಯದಲ್ಲಿ ಓಯ್ಸ್ಟರ್, ಬಟನ್ ಹಾಗೂ ಮಿಲ್ಕಿ ಬೆಳೆ ಬೇಸಾಯ, ನರ್ಸರಿಯಲ್ಲಿ ಹಣ್ಣು, ಹೂ, ತರಕಾರಿ, ಔಷಧೀಯ, ಅರೊಮೇಟಿಕ್, ಪ್ಲಾಂಟೇಷನ್ ಹಾಗೂ ಸಂಬಾರ ಗಿಡಗಳ ನರ್ಸರಿ ವಿಷಯದಲ್ಲಿ ತರಬೇತಿ ಉಚಿತವಾಗಿ ನೀಡಲಾಗುತ್ತಿದೆ.
ಇಚ್ಚಿಸುವವರು ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, 4 ಪಾಸ್ಪೋರ್ಟ್ ಭಾವಚಿತ್ರ ದಾಖಲೆಯೊಂದಿಗೆ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 7259240293 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತರಬೇತುದಾರ ಡಾ. ಪ್ರಭಾಕರ್ ತಿಳಿಸಿದ್ದಾರೆ.