ಗೋಣಿಕೊಪ್ಪ ವರದಿ, ಜ. 4: ಅಂತರ್ರಾಷ್ಟ್ರೀಯ ಮಟ್ಟದಲ್ಲಿ 3ನೇ ಅತೀ ದೊಡ್ಡ ಸಮಾಜ ಸೇವಾ ಸಂಸ್ಥೆಯಾಗಿ ಗುರುತಿಸಿ ಕೊಂಡಿರುವ ವೈಸ್ಮನ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಕೊಡಗಿನಲ್ಲಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಗೋಣಿಕೊಪ್ಪ ವೈಸ್ಮನ್ ಇಂಟರ್ನ್ಯಾಷನಲ್ ನಿಯೋಜಿತ ಅಧ್ಯಕ್ಷ ಬಿ. ರತ್ನಾಕರ್ ಶೆಟ್ಟಿ ತಿಳಿಸಿದ್ದಾರೆ.
ಇರಿಟಿ ವೈಸ್ಮನ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಗೋಣಿಕೊಪ್ಪ ವೈಸ್ಮನ್ ಇಂಟರ್ನ್ಯಾಷನಲ್ ಅನುಷ್ಠಾನಕ್ಕೆ ತರಲಾಗಿದ್ದು, ತಾ. 5 ರಂದು ಅತ್ತೂರು ಪಾಮ್ವ್ಯಾಲಿ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 6 ಗಂಟೆಗೆ ಪದಗ್ರಹಣ ನಡೆಯುವ ಪದಗ್ರಹಣದಲ್ಲಿ ಸುಮಾರು 15 ಸದಸ್ಯರು ಪದಗ್ರಹಣ ಸ್ವೀಕರಿಸಲಿದ್ದು, ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಮುಂದುವರಿಯುವದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಇರಿಟಿ ವೈಸ್ಮನ್ ಇಂಟರ್ನ್ಯಾಷನಲ್ ಅಧ್ಯಕ್ಷ ಬೆನ್ನಿ ಅಲೆಕ್ಸ್ ನೂತನ ಸದಸ್ಯರ ಹೆಸರುಗಳನ್ನು ಪ್ರತಿಷ್ಠಾಪಿಸಲಿದ್ದಾರೆ. ಪ್ರಮಾಣ ವಚನ ಬೋಧಿಸಲಿದ್ದಾರೆ. ನಿರ್ಗಮಿತ ವಲಯ ನಿರ್ದೇಶಕ ಜೋಸ್ ಜಾರ್ಜ್ ಅವರು ಕಮ್ಯೂನಿಟಿ ಸರ್ವಿಸ್ ಪ್ರಾಜೆಕ್ಟ್ ಉದ್ಘಾಟಿಸಲಿದ್ದಾರೆ. ಪದಗ್ರಹಣ ಅಧಿಕಾರಿಯಾಗಿ ನಿರ್ಗಮಿತ ಕೌನ್ಸಿಲ್ ಸದಸ್ಯ ಕೆ.ಎಂ. ಸ್ಕಾರಿಯೇಚನ್ ಭಾಗವಹಿಸಲಿದ್ದಾರೆ. ಧ್ವಜ ಹಸ್ತಾಂತರವನ್ನು ಜಿಲ್ಲಾ ಗವರ್ನರ್ ಟಿ.ಎ. ಪಾಲೋಸ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಇಬ್ಬರು ಸಮಾಜ ಸೇವಕರನ್ನು ಸನ್ಮಾನಿಸಲಾಗುವದು. ಮುಖ್ಯ ಅತಿಥಿಗಳಾಗಿ ಮೇ. ಜ. (ನಿ) ಕೆ.ಪಿ. ನಂಜಪ್ಪ ಪಾಲ್ಗೊಳ್ಳಲಿದ್ದಾರೆ. ವಲಯ ನಿರ್ದೇಶಕ ಟಿ.ಕೆ. ರಮೇಶ್ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸದಸ್ಯರಲ್ಲಿ ಸಮಾಜ ಸೇವೆ, ಸಾಂಸ್ಕøತಿಕ, ಅಭಿವೃದ್ಧಿ, ನಾಯಕತ್ವಗುಣ ಪ್ರೋತ್ಸಾಹ, ಮಾನವೀಯತೆ ಇಂತಹ ವಿಷಯಗಳಲ್ಲಿ ಪ್ರೋತ್ಸಾಹ ನೀಡಲು ಸಂಸ್ಥೆ ಗೋಷ್ಠಿಯಲ್ಲಿ ನಿಯೋಜಿತ ಕಾರ್ಯದರ್ಶಿ ಆಂಥೋನಿ ರಾಬಿನ್ ಉಪಸ್ಥಿತರಿದ್ದರು.