ಶನಿವಾರಸಂತೆ, ಜ. 5: ಶ್ರೀ ಜಯದೇವ ಜಾನುವಾರುಗಳ 74ನೇ ಜಾತ್ರಾ ಮಹೋತ್ಸವ ಹಂಡ್ಲಿ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ತಾ. 28 ರಿಂದ ಫೆ. 11ರ ವರೆಗೆ ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆಯಲಿದೆ. ಫೆ. 2 ರಿಂದ 10ರ ವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ, ಜನಪದ ಜಾತ್ರೆ ಇರುವದಾಗಿ ಜಾತ್ರಾ ಸಮಿತಿ ಪ್ರಕಟಣೆ ತಿಳಿಸಿದೆ.