ಮಡಿಕೇರಿ, ಜ. 4: ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕುಗಳ ಯುವ ಒಕ್ಕೂಟ ಮತ್ತು ವಿವಿಧ ಯುವಕ ಸಂಘ, ಯುವತಿ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ತಾ. 12 ರಿಂದ 19 ರವರೆಗೆ ಯುವ ಸಪ್ತಾಹ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.
ತಾ. 12 ರಂದು ಮಡಿಕೇರಿಯ ಸಂತೋಷ್ ಯುವಕ ಸಂಘದ ವತಿಯಿಂದ ರಾಷ್ಟ್ರೀಯ ಯುವದಿನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ತಾ. 13 ರಂದು ಸೋಮವಾರಪೇಟೆಯ ಶುಂಠಿ ಮಂಗಳೂರು ಬಸವೇಶ್ವರ ಯುವಕ ಸಂಘದ ವತಿಯಿಂದ ಸಾಂಸ್ಕøತಿಕ ದಿನ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ. ತಾ. 14 ರಂದು ಕಗ್ಗೋಡ್ಲುವಿನ ಕಾವೇರಿ ಯುವಕ ಸಂಘದ ವತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವ ದಿನ, ತಾ. 15 ರಂದು ಗೋಣಿಕೊಪ್ಪದ ಶ್ರೀದೇವಿ ಯುವತಿ ಮಂಡಳಿ ವತಿಯಿಂದ ಸಮಾಜ ಸೇವಾ ದಿನ, ತಾ. 16 ರಂದು ಭಗತ್ ಯುವಕ ಸಂಘ ಹುಳಿತಾಳ ಇವರಿಂದ ದೈಹಿಕ ಸದೃಢತೆಯ ದಿನ, ತಾ. 17 ರಂದು ಸೋಮವಾರಪೇಟೆಯ ದೊಡ್ಡಮಳ್ತೆ ನವಗಣಪತಿ ಯುವಕ ಸಂಘದ ವತಿಯಿಂದ ಶಾಂತಿಗಾಗಿ ಯುವಜನರು ಕಾರ್ಯಕ್ರಮ, ತಾ. 18 ರಂದು ಸೋಮವಾರಪೇಟೆಯ ಪೂಜಾ ಯುವತಿ ಮಂಡಳಿ ವತಿಯಿಂದ ಕೌಶಲ್ಯ ದಿನ ನಡೆಯಲಿದ್ದು ಮತ್ತು ತಾ. 19 ರಂದು ಪೊನ್ನಂಪೇಟೆಯ ಜೈ ಭೀಮ್ ಕಲಾ ಯುವಕ ಸಂಘದ ವತಿಯಿಂದ ಜಾಗೃತಿ ದಿನ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.