ಮಡಿಕೇರಿ, ಜ. 5: ರಾಷ್ಟ್ರದಲ್ಲಿ ಆಹಾರ ವಸ್ತುಗಳಿಗೆ ಸಂಬಂಧಿಸಿದ 8 ಕಾನೂನುಗಳನ್ನು ಕ್ರೋಢೀಕರಿಸಿ ಗುಣಮಟ್ಟ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಅದರಡಿ ರಚಿಸಲಾಗಿರುವ ನಿಯಮ, ನಿಬಂಧನೆಗಳು ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಉದ್ದೇಶವು ಆಹಾರ ಪದಾರ್ಥಗಳ ವ್ಯವಹಾರಸ್ಥರನ್ನು ಒಂದೇ ಸೂರಿನಡಿ ನಿಬಂಧನೆ ಮತ್ತು ಪರಿವೀಕ್ಷಣೆಗೆ ಒಳಪಡಿಸುವದಾಗಿದೆ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುವ ವಿವಿಧ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು, ಸೇವನೆಗೆ ಯೋಗ್ಯವಾದ ಆಹಾರ ಪೂರೈಸುವದು ಈ ಕಾಯ್ದೆಯ ಮೂಲ ಉದ್ದೇಶವಾಗಿದೆ. ಈ ಕಾಯ್ದೆಯು ಜನಪರವಾಗಿದ್ದು, ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯ ಎಲ್ಲಾ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್‍ಗಳು, ಸಾಗಣೆದಾರರು, ಸಗಟು/ ಚಿಲ್ಲರೆ ಮಾರಾಟಗಾರರು, ವಿತರಕರು, ಹೊಟೇಲ್, ರೆಸಾರ್ಟ್, ಕ್ಯಾಂಟೀನ್, ಸಂಚಾರಿ ಸಿದ್ಧಪಡಿಸಿದ ಆಹಾರ ಮಾರಾಟಗಾರರು, ವೈನ್ ಸ್ಟೋರ್, ಕ್ಲಬ್‍ಗಳು, ಬಾರ್ ಅಂಡ್ ರೆಸ್ಟೋರೆಂಟ್‍ಗಳು, ಹೋಮ್‍ಸ್ಟೇಗಳು, ಬೇಕರಿ, ಸಿಹಿತಿಂಡಿ, ಹಾಲು, ಹಾಲಿನ ಉತ್ಪನ್ನ, ಪ್ಯಾಕೇಜ್ಡ್ ಕುಡಿಯುವ ನೀರು ಘಟಕ/ ಮಾರಾಟಗಾರರು, ಹಣ್ಣು, ತರಕಾರಿಗಳು, ಕೋಳಿ, ಮೀನು, ಮಾಂಸ ಮಾರಾಟ, ರಸ್ತೆ ಬದಿ ಆಹಾರ ಪದಾರ್ಥ ಮಾರಾಟ, ಉಗ್ರಾಣಗಳು, ಸಂಸ್ಕರಣ ಘಟಕಗಳು, ಧಾರ್ಮಿಕ ಸ್ಥಳ, ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ಪ್ರಸಾದ/ಊಟೋಪಚಾರ ಸಂಯೋಜಕರು, ಕ್ಯಾಟರಿಂಗ್ ವ್ಯವಹಾರಸ್ಥರು, ನ್ಯಾಯಬೆಲೆ ಅಂಗಡಿ, ಕಚೇರಿಗಳ ಕ್ಯಾಂಟೀನ್, ಸರ್ಕಾರಿ/ ಸರ್ಕಾರೇತರ ವಸತಿ ನಿಲಯಗಳು, ಅಕ್ಷರ ದಾಸೋಹದ ಶಾಲೆಗಳು, ಅಂಗನವಾಡಿಗಳು ಹಾಗೂ ಎಲ್ಲಾ ರೀತಿಯ ಆಹಾರ ಪದಾರ್ಥ ವಹಿವಾಟುದಾರರು ತಾ. 31 ರೊಳಗಾಗಿ ಆಹಾರ ನೋಂದಣಿ, ಪರವಾನಗಿ, ನವೀಕರಣ ಪಡೆದುಕೊಳ್ಳುವದು.

ವಾರ್ಷಿಕ ರೂ. 12 ಲಕ್ಷದ ಒಳಗೆ ವ್ಯಾಪಾರ ನಡೆಸುವವರು ಆಹಾರ ನೋಂದಣಿ ಹಾಗೂ ರೂ. 12 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ನಡೆಸುವವರು ಆಹಾರ ಪರವಾನಗಿಯನ್ನು ಪಡೆದುಕೊಳ್ಳಬೇಕಾಗಿದೆ. ತಪ್ಪಿದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಸೆಕ್ಷನ್ 31(1) ಮತ್ತು 2.1.1 ಮತ್ತು 2.1.2 ರ ಅಡಿಯಲ್ಲಿ ಉಲ್ಲಂಘನೆಯಾಗುತ್ತದೆ ಹಾಗೂ ಶಿಕ್ಷಾರ್ಹ ಹಾಗೂ ರೂ. 5 ಲಕ್ಷ ವರೆಗಿನ ದಂಡಾರ್ಹ ಅಪರಾಧವಾಗಿರುತ್ತದೆ.

ಆಹಾರ ನೋಂದಣಿ ಹಾಗೂ ಪರವಾನೆಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ದಿನಾಂಕ: 07-03-2014 ರಿಂದ ಜಾರಿಗೊಂಡಿದೆ. ಕರ್ನಾಟಕ ರಾಜ್ಯದ ಎಲ್ಲಾ ಆಹಾರ ಪದಾರ್ಥಗಳ ವ್ಯವಹಾರಸ್ಥರು ಈ ಸವಲತ್ತನ್ನು ಈ ಎರೆಡು ಅಂರ್ತಜಾಲ ತಾಣಗಳಿಂದ ಪಡೆಯಬಹುದಾಗಿದೆ. ಜಿooಜಟiಛಿeಟಿsiಟಿg.ಜಿssಚಿi.gov.iಟಿ ಮತ್ತು ತಿತಿತಿ.ಜಿssಚಿi.gov.iಟಿ

ಹೆಚ್ಚಿನ ಮಾಹಿತಿಗೆ 08272-220054, 9449843263, 9964263599, 8861870029, 9449289203 ನ್ನು ಸಂಪರ್ಕಿಸಬಹುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ತಿಳಿಸಿದ್ದಾರೆ.