ಗೋಣಿಕೊಪ್ಪ ವರದಿ, ಜ. 5: ಜನಾಂಗದ ನಡುವೆ ನಡೆಯುವ ಅಮ್ಮಕೊಡವ ಕ್ರೀಡಾಕೂಟವನ್ನು ಬಾನಂಡ ಕುಟುಂಬ ಆಯೋಜಿಸುವ ನಿರ್ಧಾರವನ್ನು ಬಾನಂಡ ಕುಟುಂಬದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಖಿಲ ಅಮ್ಮ ಕೊಡವ ಸಮಾಜ ಹಾಗೂ ಬಾನಂಡ ಕುಟುಂಬ ಸಹಯೋಗದಲ್ಲಿ ಮೇ ತಿಂಗಳಿನಲ್ಲಿ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ನಡೆಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. 2 ದಿನ ಕ್ರೀಡಾಕೂಟ ನಡೆಸುವಂತೆಯೂ, ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ವಿವಿಧ ಕ್ರೀಡೆ ನಡೆಸಲು ನಿರ್ಧರಿಸಲಾಯಿತು.

ಆಯ್ಕೆ : ಕುಟುಂಬದ ಹಿರಿಯ ರಾದ ಬಾನಂಡ ಆರ್. ಅಪ್ಪಣಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರೀಡಾಕೂಟ ಅಧ್ಯಕ್ಷರಾಗಿ ಬಾನಂಡ ಆರ್. ಅಪ್ಪಣಮಯ್ಯ, ಗೌ. ಅಧ್ಯಕ್ಷರಾಗಿ ಬಾನಂಡ ರವಿ, ಸಂಚಾಲಕರಾಗಿ ಬಾನಂಡ ಪ್ರಥ್ಯು, ಉಪಾಧ್ಯಕ್ಷರಾಗಿ ಬಾನಂಡ ನಂಜಮಯ್ಯ, ಕಾರ್ಯದರ್ಶಿಯಾಗಿ ಬಾನಂಡ ಆರ್. ಪ್ರಕಾಶ್, ಖಜಾಂಜಿಯಾಗಿ ಬಾನಂಡ ಸುದನ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಕುಟುಂಬ ಸದಸ್ಯರುಗಳಾದ ಯಶೋಧ, ರೇಖಾ, ರೇಷ್ಮಾ, ಅನಿತಾ ಉಪಸ್ಥಿತರಿದ್ದರು. -ಸುದ್ದಿಪುತ್ರ.