ಭಾಗಮಂಡಲ, ಜ. 5: ಕೊಟ್ಟೂರು ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಸ್ಥೆ ಸ್ಥಾಪಕಾಧ್ಯಕ್ಷ ನಾಟೋಳಂಡ ಚೋಂದಮ್ಮ - ದೇವಯ್ಯ ಸ್ಮರಣಾರ್ಥ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ 2ನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಹಾಗೂ ಚೆಸ್ ಪಂದ್ಯಾವಳಿ ನಡೆಯಿತು.

ಚೆಸ್ ಸ್ಪರ್ಧೆಯಲ್ಲಿ 36, ಶಟಲ್ ಬ್ಯಾಡ್ಮಿಂಟನ್‍ನಲ್ಲಿ 32 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಚೆಸ್ ಬಾಲಕರ ವಿಭಾಗದಲ್ಲಿ ಕುಶಾಲನಗರ ಫಾತಿಮಾ ಕಾನ್ವೆಂಟ್‍ನ ರಜತ್ ಗುರುರಾಜ್ ಪ್ರಥಮ, ಗೋಣಿಕೊಪ್ಪಲಿನ ಸರ್ವದೈವತಾ ಶಾಲೆಯ ಹೆಚ್.ಎನ್. ಜೀವನ್ ದ್ವಿತೀಯ ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಸದ್ವಿನಿ ಗಿರೀಶ್ ಪ್ರಥಮ, ಫಾತಿಮಾ ಕಾನ್ವೆಂಟ್ ಶಾಲೆಯ ಮಾನಸ ನಾರಾಯಣ ದ್ವಿತೀಯ ಬಹುಮಾನ ಪಡೆದರು.

ಶಟಲ್ ಬ್ಯಾಡ್ಮಿಂಟನ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಜಯೀದ್ ಪ್ರಥಮ, ಕುಶಾಲನಗರ ಕಾನ್ವೆಂಟ್‍ನ ಸಚಿನ್ ದ್ವಿತೀಯ ಬಹುಮಾನ ಪಡೆದರು. ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅದ್ವಿಕಾ ಪೊನ್ನಪ್ಪ ಪ್ರಥಮ, ವೀರಾಜಪೇಟೆ ಕಾವೇರಿ ಪ್ರೌಢಶಾಲೆಯ ಚೋಂದಮ್ಮ ದ್ವಿತೀಯ ಬಹುಮಾನ ಪಡೆದರು.

ಬಾಲಕರ ಡಬಲ್ಸ್ ವಿಭಾಗದಲ್ಲಿ ಫಾತಿಮಾ ಕಾನ್ವೆಂಟ್ ಶಾಲೆ ಪ್ರಥಮ, ವೀರಾಜಪೇಟೆ ಸಂತ ಅನ್ನಮ್ಮ ಶಾಲೆ ದ್ವಿತೀಯ, ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಪ್ರೌಢಶಾಲೆ ಪ್ರಥಮ, ಕುಶಾಲನಗರ ಫಾತಿಮಾ ಕಾನ್ವೆಂಟ್ ದ್ವಿತೀಯ ಸ್ಥಾನ ಪಡೆಯಿತು.

ಅತ್ಯುತ್ತಮ ಉದಯೋನ್ಮುಖ ಆಟಗಾರ ಕುಶಾಲನಗರ ಫಾತಿಮಾ ವಿದ್ಯಾಸಂಸ್ಥೆಯ ಸಚಿನ್ ಫಾತಿಮಾ, ಭಾರತೀಯ ವಿದ್ಯಾಭವನದ ಅದ್ವಿಕಾ ಪೊನ್ನಪ್ಪ ಬಹುಮಾನ ಪಡೆದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ನಾಟೋಳಂಡ ಕುಶಾಲಪ್ಪ, ಕಾಶಿ, ಕಾವೇರಪ್ಪ, ಜಯ, ಅರುಣ್, ನಾಟೋಳಂಡ ವಿಜು, ಮುಖ್ಯ ಶಿಕ್ಷಕ ರಾಮಮೂರ್ತಿ ಪಾಲ್ಗೊಂಡಿದ್ದರು. ಕ್ರೀಡಾ ತೀರ್ಪುಗಾರರಾಗಿ ಸಂದೇಶ್, ಕಿಶೋರ್, ದೇವಮ್ಮಾಜಿ ಕಾರ್ಯನಿರ್ವಹಿಸಿದರು.