ಮಡಿಕೇರಿ, ಜ. 5: ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಕೇಂದ್ರದ 2018-19ನೇ ಸಾಲಿನ ದ್ವಿತೀಯ ಹಾಗೂ ತೃತೀಯ ವರ್ಷದ ಬಿ.ಎ., ಬಿ.ಕಾಂ, ಬಿ.ಬಿ.ಎ., ದ್ವಿತೀಯ ಎಂ.ಎ ಎಂ.ಕಾಂ ಮತ್ತು ಪ್ರಥಮ ವರ್ಷದ ಎಂ.ಬಿ.ಎ.\ಎಂ.ಎ. ಹಿಂದಿ ಕೋರ್ಸುಗಳಿಗೆ ಸಂಪರ್ಕ ಕಾರ್ಯಕ್ರಮ ತಾ. 6 ರಂದು (ಇಂದು) ಇತರ ಕಾಲೇಜುಗಳೊಂದಿಗೆ ನಗರದ ಎಫ್.ಎಂ.ಕೆ.ಎಂ. ಕಾರ್ಯಪ್ಪ ಕಾಲೇಜು ಇಲ್ಲಿ ಪ್ರಾರಂಭವಾಗಲಿದೆ.
ಪ್ರಥಮ ವರ್ಷದ ಬಿ.ಎ., ಬಿ.ಕಾಂ, ಬಿ.ಬಿ.ಎ., ಎಂ.ಎ ಹಾಗೂ ಎಂ.ಕಾಂ ಕೋರ್ಸುಗಳಿಗೆ ಸಂಪರ್ಕ ಕಾರ್ಯಕ್ರಮ ಮುಂದಿನ ಫೆಬ್ರವರಿ 3 ರಂದು ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ವೆಬ್ಸೈಟ್: ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿನ್ನು ನೋಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.