ವೀರಾಜಪೇಟೆ, ಜ. 4: ಮಾಯಮುಡಿ ಹಾಗೂ ಬಿಳುಗುಂದ ಗ್ರಾಮ ಪಂಚಾಯಿತಿಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.ಬಿಳುಗುಂದ ಗ್ರಾ.ಪಂನ ಪ್ರಸಾದ್ 260 ಮತಗಳನ್ನು ಪಡೆದು ಜಯ ಸಾಧಿಸಿದರೆ ಪ್ರತಿಸ್ಪರ್ಧಿ ಸಂಪತ್ 196 ಮತಗಳನ್ನು ಪಡೆದು ಸೋತಿದ್ದಾರೆ. ಮಾಯಮುಡಿ ಗ್ರಾ.ಪಂ ಶಬರೀಶ್ 445, ಮತಗಳನ್ನು ಪಡೆದು ಜಯ ಸಾಧಿಸಿದರೆ ಪ್ರತಿಸ್ಪರ್ಧಿ ಮಣಿ 314 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಮಾಯಮುಡಿ ಪಂಚಾಯಿತಿ ಸದಸ್ಯ ಶ್ರೀಧರ್, ಬಿಳುಗುಂದ ಪಂಚಾಯಿತಿ ಸದಸ್ಯ ಪ್ರವೀಣ್ ಅವರ ನಿಧನದಿಂದ ಎರಡು ಸ್ಥಾನಗಳು ತೆರವಾಗಿದ್ದವು. ತಹಶೀಲ್ದಾರ್ ಗೋವಿಂದರಾಜು ಚುನಾವಣಾ ಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಮತ ಎಣಿಕೆ ಸಂದರ್ಭದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಉಪಾಧ್ಯಕ್ಷ ಹನೀಫ್, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ ಮೋಹನ್, ಪ.ಪಂ ಸದಸ್ಯ ಅಗಸ್ಟಿನ್ ಮತ್ತಿತರು ಉಪಸ್ಥಿತರಿದ್ದರು.