ಗೋಣಿಕೊಪ್ಪ ವರದಿ, ಜ. 4 : ಜೆಸಿಐ ಪೊನ್ನಂಪೇಟೆ ನಿಸರ್ಗ ಇದರ ಅಧ್ಯಕ್ಷರಾಗಿ ಶೀಲಾ ಬೋಪಣ್ಣ, ಕಾರ್ಯದರ್ಶಿಯಾಗಿ ಎನ್. ಜಿ. ಸುರೇಶ್ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷ ವಿಕ್ರಂ ಮೂಡಗದ್ದೆ ಅವರಿಂದ ನಿಯೋಜಿತ ಅಧ್ಯಕ್ಷೆ ಶೀಲಾ ಬೋಪಣ್ಣ ಅಧಿಕಾರ ಸ್ವೀಕರಿಸಿದರು.
ಇಲ್ಲಿನ ಉಮಾಮಹೇಶ್ವರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಜೆಸಿಐ ವಲಯ 16 ರ ಉಪಾಧ್ಯಕ್ಷ ಸೋಮೇಶ್ ಶಿವಮೊಗ್ಗೆ ಅವರು ಪದಗ್ರಹಣ ಬೋಧಿಸಿದರು.
ಖಜಾಂಜಿಯಾಗಿ ವಿ. ಸಿ. ಪ್ರೀತಂ, ತರಬೇತಿ ಸಮಿತಿ ಉಪಾಧ್ಯಕ್ಷರಾಗಿ ವನೀತ್ಕುಮಾರ್, ಜಿಡಿ ಸಮಿತಿ ಉಪಾಧ್ಯಕ್ಷರಾಗಿ ಎಂ.ಎನ್ ವಿನೋದ್, ಬ್ಯುಸ್ನೆಸ್ ಉಪಾಧ್ಯಕ್ಷರಾಗಿ ಕುಪ್ಪಂಡ ದಿಲನ್, ಕಾರ್ಯಕ್ರಮ ಸಮಿತಿ ಉಪಾಧ್ಯಕ್ಷರಾಗಿ ನೆಲ್ಲೀರ ಧನಂಜಯ್, ನಿರ್ದೇಶಕರುಗಳಾಗಿ ಶಿವಕುಮಾರ್, ಜಿ.ಪಿ. ಸ್ವಾಮಿ, ಎ.ಪಿ. ದಿನೇಶ್, ಪಿ.ಎಂ. ಮಹರೂಫ್, ಹೆಚ್. ಆರ್. ಮಧು, ಅಬ್ದುಲ್ ಮುನೀರ್, ಮನೋಜ್ ಕುಮಾರ್, ಜಸ್ಮಿ ಬೋಪಣ್ಣ, ಜೆಜೆಸಿ ಅಧ್ಯಕ್ಷರಾಗಿ ಅಶ್ವಿನ್ ಸುಬ್ಬಯ್ಯ ಅವರು ಪದಗ್ರಹಣ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷ ಆಪಟೀರ ಟಾಟು ಮೊಣ್ಣಪ್ಪ, ಕಾರ್ಯದರ್ಶಿ ಎಂ. ಎನ್. ವಿನೋದ್, ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಬಿ.ಜಿ. ಮಹೇಶ್, ಹಿರಿಯ ಕಾಫಿ ಬೆಳೆಗಾರ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಸರ್ವದೈವತಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ, ಜೆಸಿಐ ವಲಯ 16 ರ ಅಧ್ಯಕ್ಷ ಜೆಫಿನ್ಜಾಯ್ ಉಪಸ್ಥಿತರಿದ್ದರು. -ಸುದ್ದಿಪುತ್ರ