ಮಡಿಕೇರಿ, ಜ. 4: ನಗರದ ಕೆಳಗಿನ ಗೌಡ ಸಮಾಜ ಕಟ್ಟಡದಲ್ಲಿ ಆಯೋಜಿಸಿದ್ದ ಸೈನಿಕ ಕಲ್ಯಾಣ ಇಲಾಖೆಯ ಎರಡು ದಿನಗಳ ಅದಾಲತ್ ಇಂದು ಮುಕ್ತಾಯಗೊಂಡಿದ್ದು, ಒಟ್ಟು 242 ಸೈನಿಕ ಕುಟುಂಬಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗಿದೆ ಎಂದು ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕಿ ಮೇಜರ್ ಗೀತಾ ತಿಳಿಸಿದ್ದಾರೆ.
ಭಾರತೀಯ ಸೇನೆಯ ಅಲಹಾಬಾದ್ ಕಚೇರಿ, ದಿಲ್ಲಿ, ಬೆಂಗಳೂರು ಶಾಖೆಗಳ ಆರ್ಥಿಕ ವಿಭಾಗದ ಅಧಿಕಾರಿಗಳು ಮತ್ತು ವಿವಿಧ ಬ್ಯಾಂಕ್ ಮುಖ್ಯಸ್ಥರು ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಇಲ್ಲಿ ಇತ್ಯರ್ಥಗೊಳಿಸದೆ ಬಾಕಿ ಇರುವಂತಹ ಪ್ರಕರಣಗಳಿಗೂ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಕೇಂದ್ರ ಕಚೇರಿಗಳಿಂದ ಪರಿಹಾರ ದೊರಕಿಸಿಕೊಡುವ ಭರವಸೆ ಹಿರಿಯ ಅಧಿಕಾರಿಗಳಿಂದ ಲಭಿಸಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಪ್ರಧಾನಿ ನರೇಂದ್ರ ಮೋದಿ
ನಿವೃತ್ತ ಸೈನಿಕರ ಕುಂದುಕೊರತೆಗೆ ಸ್ಥಳೀಯವಾಗಿ ಪರಿಹಾರ
ಕಲ್ಪಿಸಲು ಗಮನ ಹರಿಸಿದ್ದು,
ಆ ದಿಸೆಯಲ್ಲಿ ಅದಾಲತ್‍ನಿಂದ ಸಹಕಾರ ಲಭಿಸಿದಂತಾಗಿದೆ ಎಂದು ನಿವೃತ್ತ ಸೈನಿಕರು ಇಂಗಿತ ವ್ಯಕ್ತಪಡಿಸಿದ್ದಾರೆ.