*ಗೋಣಿಕೊಪ್ಪಲು, ಜ. 3 : ಅಂದಾಜು 65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪೊನ್ನಂಪೇಟೆ ಕೊಡವ ಸಮಾಜದ ಬಳಿ ಒಂದು ವಾರದ ಹಿಂದೆ ಅಪಘಾತಕ್ಕೆ ಒಳಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.27ರಂದು ಪೊನ್ನಂಪೇಟೆ ಕೊಡವ ಸಮಾಜದ ಬಳಿ ರಸ್ತೆ ದಾಟುವಾಗ ಹುದಿಕೇರಿ ಕಡೆಯಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ತೀವ್ರ ಗಾಯಗೊಂಡ ವ್ಯಕ್ತಿಯನ್ನು ವಾಹನ ಚಾಲಕರೇ ಕರೆದುಕೊಂಡು ಹೋಗಿ ಗೋಣಿಕೊಪ್ಪಲು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿಂದ ಮಡಿಕೇರಿಗೆ ಸಾಗಿಸಿ ಇದೀಗ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಿದ್ದಾರೆ. ಆದರೆ ಈ ವ್ಯಕ್ತಿ ಬಗ್ಗೆ ಯಾವದೇ ಮಾಹಿತಿ ಲಭ್ಯವಿಲ್ಲ. ಸಂಬಂಧಿಸಿದವರು ಯಾರಾದರೂ ಇದ್ದರೆ ಕೂಡಲೇ ಪೊನ್ನಂಪೇಟೆ ಪೊಲೀಸ್ ಠಾಣೆಯನ್ನು ಮೊ.ನಂ.9480804959 ರಲ್ಲಿ ಸಂಪರ್ಕಿಸುವಂತೆ ಸಬ್ ಇನ್ಸ್‍ಪೆಕ್ಟರ್ ಮಹೇಶ್ ತಿಳಿಸಿದ್ದಾರೆ.