ಕೂಡಿಗೆ, ಜ.3: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಭುವನಗಿರಿ ಹಾಗೂ ಹೆಗ್ಗಡಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ದಂಡಿನಮ್ಮ ಕೆರೆಯ ದುರಸ್ತಿಗೆ ಹಾಗೂ ಕೆರೆಯ ಹೂಳೆತ್ತಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕೆರೆಯು ಹೆಗ್ಗಡಳ್ಳಿಯಿಂದ ಭುವನಗಿರಿವರೆಗೆ 20 ಏಕರೆ ಪ್ರದೇಶ ವ್ಯಾಪ್ತಿಯಲ್ಲಿದ್ದು, ನೂರಾರು ಎಕರೆ ಪ್ರದೇಶಗಳಲ್ಲಿ ವ್ಯವಸಾಯ ಮಾಡಲು ಅನುಕೂಲವಾಗುತ್ತಿದೆ. ಈ ಕೆರೆಗೆ ಹಾರಂಗಿ ನಾಲೆಯ ನೀರು ಸೇರುತ್ತಿದ್ದು, ಕೆರೆಯಲ್ಲಿ ಹೂಳು ತುಂಬಿರುವ ಕಾರಣ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ನೀರಾವರಿ ಇಲಾಖೆಯ ಮುಖೇನಾ ಸರ್ವೇ ನಡೆಸಿದ್ದರೂ ಯಾವದೇ ಪ್ರಯೋಜನವಾಗಿರುವದಿಲ್ಲ ಎಂದು ಆರೋಪಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಡ ಇಲಾಖೆಯವರು ತುರ್ತಾಗಿ ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.