ವೀರಾಜಪೇಟೆ, ಜ. 3: ಕೇರಳ ಕಣ್ಣಾನೂರು ಜಿಲ್ಲೆಯ ಪಯ್ಯನೂರಿಗೆ ಸಮೀಪದ ಪೊರಕುನ್ನು ಬಳಿಯ ಕಾಳೇಗಾಟ್ ದೇವಸ್ಥಾನದಲ್ಲಿ ಕಳಿಯಾಟ ಮಹೋತ್ಸವವು ತಾ. 11 ರಿಂದ 13ರ ವರೆಗೆ ನಡೆಯಲಿದೆ.
ಮಲಬಾರ್, ಕೊಡಗು, ದಕ್ಷಿಣ ಕನ್ನಡದಾದ್ಯಂತ ನೂರಾರು ದೇವಾಲಯಗಳಲ್ಲಿ ದೇವ ಪ್ರತಿಷ್ಠೆ ಕಳಶ ಮುಂತಾದ ಧಾರ್ಮಿಕ ಕಾರ್ಯಗಳಿಗೆ ಹೆಸರುವಾಸಿಯಾದ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯುವ ಪ್ರಾಚೀನ ಕಾಲದ ಉತ್ಸವದಲ್ಲಿ ದೇಶ, ವಿದೇಶಗಳಿಂದ ಭಕ್ತಾದಿಗಳು ಭಾಗವಹಿಸಲಿದ್ದಾರೆ.
ಉತ್ಸವದ ಮುಖ್ಯ ಆರಾಧನೆಗಳಾದ ಮಹಾ ಗುರುತಿ ಪೂಜೆ ತಾ. 11ರಂದು ರಾತ್ರಿ ನಡೆದರೆ ತಾ. 12 ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಕರಿ ಕುಟ್ಟಿಚಾತನ್ ತೆರೆ, ತಾ. 13 ರಂದು ಉತ್ಸವ ಮುಕ್ತಾಯಗೊಳ್ಳಲಿದೆ.