ವೀರಾಜಪೇಟೆ, ಜ. 3: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ ಶ್ರೀಧರ್ ಹಾಗೂ ಸಿಬ್ಬಂದಿ ಇಂದು ಬೆಳಗಿನಿಂದಲೇ ಪಟ್ಟಣದ ಮುಖ್ಯ ಬೀದಿಯ ಫುಟ್‍ಪಾತ್‍ನಲ್ಲಿ ವ್ಯಾಪಾರಿಗಳನ್ನು ತೆರವುಗೊಳಿಸಿ ರೂ.7800 ದಂಡವನ್ನು ಸ್ಥಳದಲ್ಲಿಯೇ ವಸೂಲಿ ಮಾಡಿದರು.
ಸಂತೆ ದಿನ ಮಾತ್ರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಫುಟ್‍ಪಾತ್ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಈ ಹಿಂದೆಯೇ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತಾದರೂ ಫುಟ್‍ಪಾತ್‍ಲ್ಲಿ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದರು. ಫುಟ್‍ಪಾತ್‍ನಲ್ಲಿ ವ್ಯಾಪಾರ ಮಾಡುವದರಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಹಲವಾರು ಸಂಘ ಸಂಸ್ಥೆಗಳು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯ ನಡೆಯಿತು.
ಪಟ್ಟಣ ಪಂಚಾಯಿತಿ ಅಧಿಕಾರಿ ಗಳು ಪಟ್ಟಣದ ಹೃದಯ ಭಾಗವಾದ ಗಡಿಯಾರ ಕಂಬದಿಂದ ಅಬ್ದುಲ್ ಕಲಾಂ ರಸ್ತೆ, ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪ ರಸ್ತೆ, ಎಫ್.ಎಂ.ಸಿ ರಸ್ತೆಗಳಲ್ಲಿ ತೆರವು ಕಾರ್ಯ ಕೈಗೊಂಡರು. ಇದೇ ಸಂದರ್ಭದಲ್ಲಿ ವಹಿವಾಟು ನಡೆಸುತ್ತಿದ್ದರು. ಫುಟ್‍ಪಾತ್‍ನಲ್ಲಿ ವ್ಯಾಪಾರ ಮಾಡುವದರಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಹಲವಾರು ಸಂಘ ಸಂಸ್ಥೆಗಳು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯ ನಡೆಯಿತು.
ಪಟ್ಟಣ ಪಂಚಾಯಿತಿ ಅಧಿಕಾರಿ ಗಳು ಪಟ್ಟಣದ ಹೃದಯ ಭಾಗವಾದ ಗಡಿಯಾರ ಕಂಬದಿಂದ ಅಬ್ದುಲ್ ಕಲಾಂ ರಸ್ತೆ, ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪ ರಸ್ತೆ, ಎಫ್.ಎಂ.ಸಿ ರಸ್ತೆಗಳಲ್ಲಿ ತೆರವು ಕಾರ್ಯ ಕೈಗೊಂಡರು. ಇದೇ ಸಂದರ್ಭದಲ್ಲಿ ವರ್ತಕರ ನಡುವೆ ಘರ್ಷಣೆ ಉಂಟಾಗದಂತೆ ಪೊಲೀಸ್ ಭದ್ರತೆಯನ್ನು ಪಟ್ಟಣ ಪಂಚಾಯಿತಿ ಬಳಸಿಕೊಂಡಿತು. ಈ ಸಂದರ್ಭ ಆರೋಗ್ಯಾಧಿಕಾರಿ ಸೋಮೇಶ್, ದಫೇದಾರ್ ವೇಲುಮುರುಗನ್ ನಗರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿ ಇದ್ದರು.
ಕಳೆದ ವಾರದಲ್ಲಿ ನಗರ ಚೇಂಬರ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆಯಲ್ಲಿ ಈ ಸಂಬಂಧ ಸಭೆ ನಡೆಸಲಾಗಿದೆ. ಸ್ವತಃ ಖುದ್ದು ಕೆಲವು ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಲಾಗಿದೆ. ಈ ಬಾರಿ ದಂಡ ವಿದಿಸಿ ಕಳುಹಿಸಲಾಗಿದೆ. ಮುಂದಿನ ಬಾರಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವದು. ಪಟ್ಟಣದಲ್ಲಿ ಹಲವಾರು ವರ್ತಕರು ಅಂಗಡಿ ಮುಂಗಟ್ಟುಗಳ ಪರವಾನಿಗಿಯನ್ನು ನವೀಕರಿಸದ ಕಾರಣ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎ.ಎಂ. ಶ್ರೀಧರ್ ಮಾಧ್ಯಮದವರಿಗೆ ತಿಳಿಸಿದರು.