ಕೂಡಿಗೆ,ಜ. 3 : ಇಲ್ಲಿಗೆ ಸಮೀಪದ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಪ್ರಪ್ರಥಮವಾಗಿ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಕಣಿವೆಯಲ್ಲಿ ನಡೆಸಲು ತೀರ್ಮಾನಿಸಿದ್ದು, ಪೂರ್ವಭಾವಿ ಸಭೆಯು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಸ್. ಸುರೇಶ್ ಸಮ್ಮುಖದಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆದವು. ಸಭೆಯಲ್ಲಿ ಸಮ್ಮೇಳನದ ಬಗ್ಗೆ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾರಧ್ವಾಜ್ ಆನಂದ್ ತೀರ್ಥ, ಹೆಬ್ಬಾಲೆ ಗ್ರಾ.ಪಂ ಸದಸ್ಯರಾದ ವೆಂಕಟೇಶ್, ಮಹೇಶ್, ಶಿವನಂಜಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಅಶ್ವತ್ ಕುನಾರ್, ಕೆ.ಕೆ.ನಾಗರಾಜ್ ಶೆಟ್ಟಿ, ದೇವಾಲಯ ಸಮಿತಿಯ ನಿರ್ದೇಶಕರುಗಳಾದ ಮಧು, ಹೇಮರಾಜ್, ಲೋಕೇಶ್, ಕೆ.ಎಸ್.ಮಾದವ, ಕೃಷ್ಣಮೂರ್ತಿ ಹಾಗೂ ಇನ್ನಿತರರು ಇದ್ದರು.