ಮಡಿಕೇರಿ, ಜ. 3: ಪರಿಷ್ಕøತ ಮತದಾರರ ಪಟ್ಟಿಯ ಪರಿಶೀಲನಾ ಸಭೆಯು ರಾಜ್ಯ ಚುನಾವಣಾ ಆಯೋಗದ ಮತದಾರರ ಪಟ್ಟಿ ವೀಕ್ಷಕ ಜಾವೇದ್ ಅಕ್ತರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಪರಿಷ್ಕøತ ಅಂತಿಮ ಮತದಾರರ ಪಟ್ಟಿಯು ತಾ. 15ಕ್ಕೆ ಬಿಡುಗಡೆಯಾಗುತ್ತಿದ್ದು, ಈ ಸಂಬಂಧ ಹೊಸದಾಗಿ ಹೆಸರು ಸೇರ್ಪಡೆ ಗೊಂಡಿರುವದು ಹಾಗೂ ಪಟ್ಟಿಯಿಂದ ಮರಣ ಹೊಂದಿದವರ ಹಾಗೂ ಇನ್ನಿತರೆ ಕಾರಣಗಳಿಂದ ಹೆಸರುಗಳನ್ನು ತೆಗೆದು ಹಾಕಿ ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನು ಪರಿಶೀಲಿಸಿದರು.
ಈ ಸಂಬಂಧ ಆಕ್ಷೇಪಣೆಗಳು ಬಂದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ತಾ. 15ರ ನಂತರ ಹೊಸ ಪಟ್ಟಿ ಬಿಡುಗಡೆಯಾದ ಬಳಿಕ ಯಾವದೇ ರೀತಿಯ ದೂರುಗಳು ಬಂದಲ್ಲಿ ಅದರ ಮಾಹಿತಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ತಹಶೀಲ್ದಾರ್ಗಳಾದ ಗೋವಿಂದರಾಜು, ಮಹೇಶ್, ಕುಸುಮ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇತರರು ಇದ್ದರು.