ಕುಶಾಲನಗರ, ಜ. 3: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚ್ರಕ ಸವಾರಿ ಮಾಡುತ್ತಿದ್ದ ಯುವತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಕುಶಾಲನಗರದ ಕಡೆ ಬರುತ್ತಿದ್ದ ಸ್ಕೂಟಿ (ಕೆಎ.12.ಕ್ಯು.2358) ಮತ್ತು ಕೊಪ್ಪ ಕಡೆ ತೆರಳುತ್ತಿದ್ದ ಇನ್ನೋವ ಕಾರು (ಕೆಎ.45.ಎಂ.3607) ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರ ಎದುರುಗಡೆ ಡಿಕ್ಕಿಯಾಗಿದೆ. ಘಟನೆಯಲ್ಲಿ ದ್ವಿಚಕ್ರ ಸವಾರಿ ಮಾಡುತ್ತಿದ್ದ ಕೂಡ್ಲೂರು ನಿವಾಸಿ ಯುವತಿ ಕಾವ್ಯ ಎಂಬವರ ಬಲಗಾಲು ಮುರಿತಕ್ಕೊಳಗಾಗಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಗಾಯಾಳು ಯುವತಿಯನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಸಂಬಂಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.