ವೀರಾಜಪೇಟೆ, ಜ. 2: ವೀರಾಜಪೇಟೆಯಲ್ಲಿ 4 ವಸತಿ ಶಾಲೆಗಳಿದ್ದು, ಉತ್ತಮವಾಗಿ ನಡೆದು ಬರುತ್ತಿದೆ ಎನ್ನಬಹುದಾಗಿದೆ. ಆದರೆ ಇಲ್ಲಿ ಅಧಿಕಾರಿಗಳು ತಮ್ಮ ಹೊಣೆ ನಿಭಾಯಿಸುವಲ್ಲಿ ವಿಫಲರಾಗಿರುವದು ಕಾಣುತ್ತದೆ. ಛತ್ರಕೆರೆ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಎಲ್ಲವೂ ಅಚ್ಚುಕಟ್ಟಾಗಿಯೇ ಇದೆ. ಆದರೆ ನೀರಿನ ಸಮಸ್ಯೆ ಇದೆ. ಇಲ್ಲಿನ ವಾರ್ಡನ್ ತಿಳಿಸಿದಂತೆ ಒಂದು ತೆರೆದ ಬಾವಿಯೇ ಇಲ್ಲಿ ನೀರಿನ ಆಸರೆ. ಈ ಬಾವಿಯ ಕೆಳ ಭಾಗದಲ್ಲಿ ಮಠದ ಗದ್ದೆ ಇದೆ; ಅವರು ಗದ್ದೆ ಭಾಗವನ್ನು ದುರಸ್ತಿ ಮಾಡಿದ್ದಾರೆ. ತೋಡನ್ನು ಆಳಗೊಳಿಸಿದ್ದಾರೆ. ಇದರಿಂದ ಬಾವಿಯಲ್ಲಿ ಹೆಚ್ಚಿನ ನೀರು ಇಲ್ಲ. ಅದನ್ನು ಆಳಗೊಳಿಸಿ ರಿಂಗ್ ಅಳವಡಿಸಬೇಕಿತ್ತು ಆ ಕೆಲಸ ಅಧಿಕಾರಿಗಳು ಮಾಡಲಿಲ್ಲ. ಈಗ ಬಾವಿಯಲ್ಲಿ ಒಂದಷ್ಟು ನೀರು ಸಿಕ್ಕಿದರೂ ಅದು ಮಕ್ಕಳಿಗೆ ಸಾಲದು. ಪೂರಕವಾಗಿ ಕೊರೆಸಿದ ಕೊಳವೆ ಬಾವಿ ವೈಫÀಲ್ಯ ಕಂಡಿದೆ. ಪಟ್ಟಣ ಪಂಚಾಯಿತಿ ನೀರು ಆಸರೆಯಾಗಿತ್ತು, ಆದರೆ ಪ.ಪಂ.ನ ನಿರ್ಲಕ್ಷ್ಯದಿಂದ ಸಮಗ್ರ ನೀರು ಪೂರೈಕೆ ಆಗುವದಿಲ್ಲ. ಇದರಿಂದ ಪಟ್ಟಣ ಪಂಚಾಯಿತಿ ಯಿಂದಲೂ ನೀರು ಇಲ್ಲದೆ ಮಕ್ಕಳಿಗೆ ತೊಂದರೆ ಆಗುತ್ತಿದೆ, ಬೇಸಿಗೆ ದಿನವಾದರಿಂದ ನೀರಿನ ಸಮಸ್ಯೆ ಕಾಡಲಿದೆ. ಇದರ ಒತ್ತಿನಲ್ಲಿರುವ ಡಿ. ದೇವರಾಜು ಅರಸು ಹಿಂದುಳಿದವರ ಮೆಟ್ರಿಕ್ ನಂತರದ ವಸತಿ ಶಾಲೆಯಲ್ಲಿ
ವೀರಾಜಪೇಟೆ, ಜ. 2: ವೀರಾಜಪೇಟೆಯಲ್ಲಿ 4 ವಸತಿ ಶಾಲೆಗಳಿದ್ದು, ಉತ್ತಮವಾಗಿ ನಡೆದು ಬರುತ್ತಿದೆ ಎನ್ನಬಹುದಾಗಿದೆ. ಆದರೆ ಇಲ್ಲಿ ಅಧಿಕಾರಿಗಳು ತಮ್ಮ ಹೊಣೆ ನಿಭಾಯಿಸುವಲ್ಲಿ ವಿಫಲರಾಗಿರುವದು ಕಾಣುತ್ತದೆ. ಛತ್ರಕೆರೆ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಎಲ್ಲವೂ ಅಚ್ಚುಕಟ್ಟಾಗಿಯೇ ಇದೆ. ಆದರೆ ನೀರಿನ ಸಮಸ್ಯೆ ಇದೆ. ಇಲ್ಲಿನ ವಾರ್ಡನ್ ತಿಳಿಸಿದಂತೆ ಒಂದು ತೆರೆದ ಬಾವಿಯೇ ಇಲ್ಲಿ ನೀರಿನ ಆಸರೆ. ಈ ಬಾವಿಯ ಕೆಳ ಭಾಗದಲ್ಲಿ ಮಠದ ಗದ್ದೆ ಇದೆ; ಅವರು ಗದ್ದೆ ಭಾಗವನ್ನು ದುರಸ್ತಿ ಮಾಡಿದ್ದಾರೆ. ತೋಡನ್ನು ಆಳಗೊಳಿಸಿದ್ದಾರೆ. ಇದರಿಂದ ಬಾವಿಯಲ್ಲಿ ಹೆಚ್ಚಿನ ನೀರು ಇಲ್ಲ. ಅದನ್ನು ಆಳಗೊಳಿಸಿ ರಿಂಗ್ ಅಳವಡಿಸಬೇಕಿತ್ತು ಆ ಕೆಲಸ ಅಧಿಕಾರಿಗಳು ಮಾಡಲಿಲ್ಲ. ಈಗ ಬಾವಿಯಲ್ಲಿ ಒಂದಷ್ಟು ನೀರು ಸಿಕ್ಕಿದರೂ ಅದು ಮಕ್ಕಳಿಗೆ ಸಾಲದು. ಪೂರಕವಾಗಿ ಕೊರೆಸಿದ ಕೊಳವೆ ಬಾವಿ ವೈಫÀಲ್ಯ ಕಂಡಿದೆ. ಪಟ್ಟಣ ಪಂಚಾಯಿತಿ ನೀರು ಆಸರೆಯಾಗಿತ್ತು, ಆದರೆ ಪ.ಪಂ.ನ ನಿರ್ಲಕ್ಷ್ಯದಿಂದ ಸಮಗ್ರ ನೀರು ಪೂರೈಕೆ ಆಗುವದಿಲ್ಲ. ಇದರಿಂದ ಪಟ್ಟಣ ಪಂಚಾಯಿತಿ ಯಿಂದಲೂ ನೀರು ಇಲ್ಲದೆ ಮಕ್ಕಳಿಗೆ ತೊಂದರೆ ಆಗುತ್ತಿದೆ, ಬೇಸಿಗೆ ದಿನವಾದರಿಂದ ನೀರಿನ ಸಮಸ್ಯೆ ಕಾಡಲಿದೆ. ಇದರ ಒತ್ತಿನಲ್ಲಿರುವ ಡಿ. ದೇವರಾಜು ಅರಸು ಹಿಂದುಳಿದವರ ಮೆಟ್ರಿಕ್ ನಂತರದ ವಸತಿ ಶಾಲೆಯಲ್ಲಿ ಯಾಗುತ್ತದೆ. ಪಟ್ಟಣ ಪಂಚಾಯಿತಿ ಯಿಂದ ನೀರು ಸಮರ್ಪಕವಾಗಿ ಪೂರೈಕೆ ಆಗುವದಿಲ್ಲ. ಸೂಕ್ತ ನೀರು ಕೊಡಿ ಎಂದರೆ ಪ್ರತ್ಯೇಕವಾಗಿ ವಸತಿ ನಿಲಯಕ್ಕೆ ಮಾತ್ರ ಕೊಳವೆ ಅಳವಡಿಸಿ ನೀರು ನೀಡಲು ಸಾಧ್ಯವಾಗುವದಿಲ್ಲ ಎಂಬ ಉತ್ತರ ನೀಡುತ್ತದೆ ಪ.ಪಂ. ಎನ್ನುವದು ವಸತಿ ನಿಲಯದ ಸಿಬ್ಬಂದಿಗಳ ಮಾತು. ಕಟ್ಟಡಕ್ಕೆ ಕಾಯಕಲ್ಪ ಮತ್ತು ನೀರಿನ ಸಮಗ್ರ ವ್ಯವಸ್ಥೆ ಇಲ್ಲಿ ಮಾಡಬೇಕಿದೆ.
ಇನ್ನು ಜೂನಿಯರ್ ಕಾಲೇಜು ಒತ್ತಿನಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಸದ್ಯಕ್ಕೆ ಯಾವ ಸಮಸ್ಯೆ ಕಂಡು ಬಂದಿಲ್ಲ. ಆದರೆ ಇಲ್ಲಿಗೆ ಖಾಯಂ ಆದ ವಾರ್ಡನ್ ನೇಮಕ ಆಗಬೇಕಿದೆ, ಸಂಚಾರಿ ವಾರ್ಡನ್‍ನಿಂದ ಪ್ರಯೋಜನ ಇಲ್ಲ. ಪಕ್ಕದ ಸಾರ್ವಜನಿಕ ಬಾಲಕರ ವಸತಿ ನಿಲಯದಲ್ಲಿಯೂ ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಆದರೆ ಇಲ್ಲಿ ಒಂದು ಜನರೇಟರ್ ಅಳವಡಿಕೆ ಆಗಿದೆ. ಕಾಮಗಾರಿ ಕಳೆದ ಬೇಸಿಗೆಯಿಂದ
ಯಾಗುತ್ತದೆ. ಪಟ್ಟಣ ಪಂಚಾಯಿತಿ ಯಿಂದ ನೀರು ಸಮರ್ಪಕವಾಗಿ ಪೂರೈಕೆ ಆಗುವದಿಲ್ಲ. ಸೂಕ್ತ ನೀರು ಕೊಡಿ ಎಂದರೆ ಪ್ರತ್ಯೇಕವಾಗಿ ವಸತಿ ನಿಲಯಕ್ಕೆ ಮಾತ್ರ ಕೊಳವೆ ಅಳವಡಿಸಿ ನೀರು ನೀಡಲು ಸಾಧ್ಯವಾಗುವದಿಲ್ಲ ಎಂಬ ಉತ್ತರ ನೀಡುತ್ತದೆ ಪ.ಪಂ. ಎನ್ನುವದು ವಸತಿ ನಿಲಯದ ಸಿಬ್ಬಂದಿಗಳ ಮಾತು. ಕಟ್ಟಡಕ್ಕೆ ಕಾಯಕಲ್ಪ ಮತ್ತು ನೀರಿನ ಸಮಗ್ರ ವ್ಯವಸ್ಥೆ ಇಲ್ಲಿ ಮಾಡಬೇಕಿದೆ.
ಇನ್ನು ಜೂನಿಯರ್ ಕಾಲೇಜು ಒತ್ತಿನಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಸದ್ಯಕ್ಕೆ ಯಾವ ಸಮಸ್ಯೆ ಕಂಡು ಬಂದಿಲ್ಲ. ಆದರೆ ಇಲ್ಲಿಗೆ ಖಾಯಂ ಆದ ವಾರ್ಡನ್ ನೇಮಕ ಆಗಬೇಕಿದೆ, ಸಂಚಾರಿ ವಾರ್ಡನ್‍ನಿಂದ ಪ್ರಯೋಜನ ಇಲ್ಲ. ಪಕ್ಕದ ಸಾರ್ವಜನಿಕ ಬಾಲಕರ ವಸತಿ ನಿಲಯದಲ್ಲಿಯೂ ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಆದರೆ ಇಲ್ಲಿ ಒಂದು ಜನರೇಟರ್ ಅಳವಡಿಕೆ ಆಗಿದೆ. ಕಾಮಗಾರಿ ಕಳೆದ ಬೇಸಿಗೆಯಿಂದ ಕೂಡ ಇಲ್ಲಿ ಸಾಕಷ್ಟು ಸಮಯಾವಕಾಶ ದೊರಕುತ್ತದೆ, ಹೆಚ್ಚಿನ ಅಂಕಗಳನ್ನು ಪಡೆಯಲು ವಸತಿ ನಿಲಯಗಳು ಸಹಕಾರಿಯಾಗಲಿದೆ ಎಂದು ವಾರ್ಡನ್‍ಗಳು ಪತ್ರಿಕೆಯೊಂದಿಗೆ ವಿಚಾರ ಹಂಚಿಕೊಂಡರು. ಮೇಲ್ನೋಟಕ್ಕೆ ಯಾವದೇ ಗಂಭೀರ ಸಮಸ್ಯೆಗಳು ಕಂಡುಬರದೆ ಇದ್ದರೂ ನೀರಿನ ಸಮಸ್ಯೆ ಬೇಸಿಗೆ ಕಾಲವಾ ದ್ದರಿಂದ ಬಿಗಡಾಯಿಸಬಹುದು ಎಂದು ಸಿಬ್ಬಂದಿಗಳು ಹೇಳುತ್ತಾರೆ. ಒಂದೊಂದು ವಸತಿ ನಿಲಯದಲ್ಲಿ 50 ರಿಂದ 70 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು, ಅವರಿಗೆ ಪ್ರತಿನಿತ್ಯ ಸ್ನಾನ, ಬಟ್ಟೆ ತೊಳೆಯುವದು ಮುಂತಾದ ಕೆಲಸಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗದೆ ಇದ್ದಲ್ಲಿ ಬಹಳ ತೊಂದರೆ ಉಂಟಾಗುತ್ತದೆ. ಅದನ್ನು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕಿದೆ. ಮೂಲಭೂತ ಅವಶ್ಯಕತೆಗಳು ಸರಿಯಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳುವದು ಕೂಡ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ ಕೆಲವೇ ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಂಡರೆ ಉತ್ತಮ ವಸತಿ ನಿಲಯಗಳು ಎಂಬದಕ್ಕೆ ಸಾಕ್ಷಿಯಾಗಲಿದೆ.
- ರಂಜಿತಾ ಕಾರ್ಯಪ್ಪ