ಕುಶಾಲನಗರ, ಜ. 1 : ಪಟ್ಟಣದ ನೂರ್ ಮದೀನಾ ಮದ್ರಸದಲ್ಲಿ ಮದÀ್ಯ ಹಾಗೂ ಮಾದಕ ಪದಾರ್ಥಗಳ ವಿರುದ್ಧ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ನಡೆಯಿತು. ಸ್ಥಳೀಯ ಎಸ್‍ಎಸ್‍ಎಫ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕೈಸರ್ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು. ಈ ಸಂದರ್ಭ ನೂರ್ ಮದೀನಾ ಮದ್ರಸ ಗುರುಗಳಾದ ಹಾಫಿಲ್ ಶೌಕತ್ ಅಲಿ, ಅಬ್ದುಲ್ ರಶೀದ್ ಹಳರಮಿ, ನಾಸಿರ್, ಆಸಿಫ್, ರಜಾಕ್, ಅಬ್ದುಲ್ ಅಜೀಜ್ ಹಾಗೂ ವಿದ್ಯಾರ್ಥಿಗಳು ಇದ್ದರು.