ಮಡಿಕೇರಿ, ಜ. 1: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ ನಿಯಮಿತ, ಮಡಿಕೇರಿ ಈ ಸಂಘದ ಮಾಸಿಕ ಆಡಳಿತ ಮಂಡಳಿ ಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಈ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಸಂತ್ರಸ್ತ ಸದಸ್ಯರುಗಳಿಗೆ ನೆರವು ನೀಡುವ ಕಾರ್ಯಕ್ರಮ ನಡೆಯಿತು. ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾದ ಸಂಘದ ಸದಸ್ಯರುಗಳಿಗೆ ಮಹಾಸಭೆಯಲ್ಲಿ ತೀರ್ಮಾನಿಸಿದಂತೆ ನೆರವು ನೀಡಲು ನಿರ್ಧರಿಸಿದ್ದು, ಸುಮಾರು 65 ಜನ ಸಂತ್ರಸ್ತ ಸದಸ್ಯರುಗಳಿಂದ ಪರಿಹಾರಕ್ಕೆ ಅರ್ಜಿ ಬಂದಿದ್ದು, ಈ ಕುರಿತು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿ ಸದಸ್ಯರುಗಳ ಡಿವಿಡೆಂಡು ಹಾಗೂ ಸಂಘದ ಸಾರ್ವಜನಿಕ ಉಪಯೋಗ ನಿಧಿಯನ್ನು ಕ್ರೋಢಿಕರಿಸಿ ಸದಸ್ಯರು ಗಳಿಗೆ ಉಂಟಾದ ನಷ್ಟಗಳಿಗನು ಸಾರವಾಗಿ ಸದಸ್ಯ ರುಗಳಿಗೆ ಉಪಯೋಗವಾಗುವಂತೆ ಸಂಘದ ಮಾರಾಟ ವಿಭಾಗದಲ್ಲಿ ದೊರೆಯುವ ಹತ್ಯಾರು ಸಾಮಗ್ರಿಗಳಾದ ಕೃಷಿ ಉಪಕರಣಗಳನ್ನು ಪರಿಹಾರ ರೂಪದಲ್ಲಿ ನೀಡಲು ನಿರ್ಧರಿಸ ಲಾಗಿದ್ದು, ಸದಸ್ಯರುಗಳು ಪರಿಕರಗಳನ್ನು ಹೊಂದಿಕೊಳ್ಳುವಂತೆ ಅಧ್ಯಕ್ಷರು ತಿಳಿಸಿದರು. ಉಪಾಧ್ಯಕ್ಷ ಕೆ.ಆರ್. ಅನಂತ್ ಕುಮಾರ್ ಸಂತ್ರಸ್ತ ಸದಸ್ಯರುಗಳಿಗೆ ಸಾಂತ್ವನ ಹೇಳಿ, ಕೃಷಿ ಚಟುವಟಿಕೆ ಗಳಿಗೆ ಸಾಮಗ್ರಿಗಳನ್ನು ಪಡೆದು ಕೊಳ್ಳುವಂತೆ ಹೇಳಿದರು. ಸಂಘದ ಮಾಜಿ ಅಧ್ಯಕ್ಷ ಎಂ.ಕೆ. ಚೋಟು ಕಾವೇರಿಯಪ್ಪ ಸಂಘದ ವತಿಯಿಂದ ನೀಡಲಾಗುತ್ತಿರುವ ಅಲ್ಪ ಮೊತ್ತದ ಪರಿಕರಗಳನ್ನು ಫೆಬ್ರವರಿ -2019ರ ಅಂತ್ಯದೊಳಗೆ ಖರೀದಿಸಿ ಸಂಘದ ಏಳಿಗೆಗೆ ಸಹಕರಿಸುವಂತೆ ಕೋರಿದರು. ಸಂತ್ರಸ್ತ ಸದಸ್ಯರುಗಳಾದ ಎಂ.ಕೆ. ಕಾರ್ಯಪ್ಪ, ಸಿ.ಬಿ. ಕಾಳಪ್ಪ, ಪಿ.ಎಸ್. ಮಂದಣ್ಣ, ಕೆ.ಎಸ್. ರಾಮಯ್ಯ, ಎ.ಜೆ. ಗಣಪತಿ, ಕೆ.ಯು. ಹೇಮಂತ್, ಬಿ.ಎಂ. ಬಾಲಕೃಷ್ಣ ಮತ್ತು ಕೆ.ಯು. ಪ್ರೇಮಕುಮಾರಿ ಮುಂತಾದವರುಗಳಿಗೆ ಪರಿಹಾರ ಸರಕುಗಳನ್ನು ಖರೀದಿಸಲು ಪರಿಹಾರ ಪತ್ರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಕೆ.ಬಿ. ಟಾಟ ಚಂಗಪ್ಪ, ಎಂ.ಸಿ. ಅಯ್ಯಣ್ಣ, ಎಸ್.ಎಸ್. ಈರಪ್ಪ, ಎಂ.ಜಿ. ಮೋಹನ್‍ದಾಸ್, ಡಿ.ಬಿ. ಅಣ್ಣಯ್ಯ, ಬಿ.ಸಿ. ಗಣಪತಿ, ಹೆಚ್.ಎನ್. ಈರಪ್ಪ, ಬಿ.ಸಿ. ಚೆನ್ನಪ್ಪ, ಎ.ಕೆ. ಸುಶೀಲಾ, ಸಿ.ಟಿ. ವೇದಾವತಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.