ಮಡಿಕೇರಿ, ಜ. 2: ಮಡಿಕೇರಿಯ ಮಹದೇವಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ 24ನೇ ವರ್ಷದ ವಾರ್ಷಿಕೋತ್ಸವ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ನಡೆಯಿತು.
ಬೆಳಿಗ್ಗೆ ಸತ್ಯನಾರಾಯಣ ಪೂಜೆಯಿಂದ ಪ್ರಾರಂಭವಾದ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಮರಗೋಡು ಭಾರತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಭಾಗ್ಯ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯ ಶ್ರೀಕೃಷ್ಣಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ರತ್ನಮ್ಮ ಜಯಣ್ಣ ಆಗಮಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ ಅಧ್ಯಕ್ಷ ಗಜಾನನ, ಸತ್ಯನಾರಾಯಣ ಪೂಜೆ ಮತ್ತು ಬೋಜನ ಸೇವಾರ್ಥದಾರರಾದ ಭಾರತಿ ಸುಬ್ರಮಣ್ಯ, ಮಡಿಕೇರಿ ಮಹಿಳಾ ಸಮಾಜದ ಅಧ್ಯಕ್ಷೆ ಭಾರತಿ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರತ್ನಮ್ಮ ಜಯಣ್ಣ ಅವರು 24 ವರ್ಷದಿಂದ ಒಗ್ಗಟ್ಟಿನಿಂದ ದುಡಿಯು ತ್ತಿರುವ ಮಹಿಳಾ ಸಮಾಜದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಫೆಬ್ರವರಿ ಮೊದಲ ವಾರದಲ್ಲಿ ತರಿಕೆರೆಯಲ್ಲಿ ನಡೆಯುವ ರಾಜ್ಯಮಟ್ಟದ ದೇವಾಂಗ ನೇಕಾರ ಮಹಾ ಸಮ್ಮೇಳನಕ್ಕೆ ಆಹ್ವಾನಿಸಿದರು.
ಮಹಿಳಾ ಸಮಾಜದ ಉಪಾಧ್ಯಕ್ಷೆ ಪದ್ಮಾಮೋಹನ್ ಸಮಾಜದ ಕಾರ್ಯಕ್ರಮ ಹಾಗೂ ಚಟುವಟಿಕೆಗಳ ಬಗ್ಗೆ ತಿಳಿಸಿದರು.
ಅತಿಥಿಗಳಾದ ಗಜಾನನ ಅವರು ಮಾತನಾಡಿ, ಮಹಿಳಾ ಸಮಾಜದ ಅಭಿವೃದ್ಧಿಗಾಗಿ ಸಹಾಯಹಸ್ತವನ್ನು ನೀಡುವದಾಗಿ ತಿಳಿಸಿದರು.
ಪೂಜಾ ಸೇವಾರ್ಥದಾರರಾದ ಭಾರತಿ ಸುಬ್ರಮಣ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್.ಎಸ್. ಎಲ್.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ ಗೀತಾ ಪ್ರಶಾಂತ್, ಧೀರಜ್ ದೇವರಾಜ್, ಅರ್ಜುನ್ ಕೆಂಚೆಟ್ಟಿ, ದ್ವಿತೀಯ ಪಿಯುಸಿಯಲ್ಲಿ ಚಂದನಾ ನಾಗೇಶ್, ವೀಣಾ ವಸಂತ್, ಕೆಂಚೆಟ್ಟಿ ಶೋಭ ರಕ್ಷಿತ್, ಬಿ.ಕಾಂ.ನಲ್ಲಿ ಲೇಖನ್ಗವಿ, ಎಂ.ಸಿ.ಎ.ನಲ್ಲಿ ನಮಿತಾ ಚಂದ್ರಶೇಖರ್, ಕೀರ್ತನಾ, ಎಂ.ಬಿ.ಎ.ನಲ್ಲಿ ರಂಜಿತಾ ಗಣೇಶ್, ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮೇಘಾ ಸುಜಯ್, ಮಡಿಕೇರಿ ತಾಲೂಕು ಕ್ರೀಡಾಕೂಟದಲ್ಲಿ ಚೆಸ್ನಲ್ಲಿ ಪ್ರಥಮ ಸ್ಥಾನ ಪಡೆದ ಜೀವನ್ ಪ್ರಶಾಂತ್, ಮಂಗಳೂರಿನ ಸೆಂಟ್ ಅಲೋಷಿಯಸ್ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಗೀತಾ ಪ್ರಶಾಂತ್ ಅವರನ್ನು ಪುರಸ್ಕರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾಗ್ಯ ಪ್ರಕಾಶ್ ಸಭೆಯನ್ನುದ್ದೇಶಿಸಿ ಮಾತನಾಡಿ ಸಮಾಜವು ಅಭಿವೃದ್ಧಿ ಹೊಂದಲು ಸಹಕಾರ ಬಹಳಷ್ಟಿದೆ.
ಆಟದಲ್ಲಿ ವಿಜೇತರಾದ ಮಕ್ಕಳಿಗೂ, ಮಹಿಳೆಯರಿಗೂ ಬಹುಮಾನ ವಿತರಿಸಲಾಯಿತು. ಇಂದ್ರ ಜಯರಾಂ, ಪದ್ಮಾ ಮೋಹನ್, ಭಾರತಿ ಸುಬ್ರಮಣಿ ಪ್ರಾರ್ಥಿಸಿ, ಇಂದ್ರ ಜಯರಾಂ ಸ್ವಾಗತಿಸಿದರು. ಶಾಂತಾ ವಸಂತ್ ವಂದಿಸಿದರು. ಜಯಶ್ರೀ ರವಿ, ನಂದಿನಿ ಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಸರೋಜರಾಜು, ಲಲಿತಾ ಸುರೇಶ್, ಪೂರ್ಣಿಮಾ ಜಗದೀಶ್, ವಿದ್ಯಾ ದೇವರಾಜು ಕಾರ್ಯಕ್ರಮದಲ್ಲಿ ಸಹಕರಿಸಿದರು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಿತು.