ಮಡಿಕೇರಿ, ಜ. 2: ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರ ಸಹಾಯಕ್ಕಾಗಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸಮಿತಿಯು ನಡೆಸುತ್ತಿರುವ ಸಾಂತ್ವನ ಕಾರ್ಯಗಳು ಅತ್ಯಂತ ಶ್ಲಾಘನೀಯ ಎಂದು ಜಿ.ಪಂ. ಸದಸ್ಯ ಲತೀಫ್ ಅಭಿಪ್ರಾಯಪಟ್ಟರು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು.ಎ.ಇ ಸಮಿತಿಯ ವತಿಯಿಂದ ಇತ್ತೀಚಿಗೆ ದುಬೈನಲ್ಲಿ ನಡೆದ ಬೃಹತ್ ಹುಬ್ಬುರ್ರಸೂಲ್ ಸಮಾವೇಶ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಭಾಷಣ ಮಾಡಿದ ಲತೀಫ್ ಸಂಘಟನೆ ಅತ್ಯಾವಶ್ಯಕವಾಗಿದ್ದು, ಸಾಂತ್ವನದ ಬೆಳಕು ಸದಾ ಕೊಡಗಿನಲ್ಲಿ ಪಸರಿಸಲು ತಮ್ಮಿಂದಾಗುವ ಸಹಾಯ ಮಾಡಲು ಮನವಿ ಮಾಡಿದರು.
ಸ್ವಾಗತ ಸಮಿತಿ ಛೇರ್ಮನ್ ಅರಾಫತ್ ನಾಪೋಕ್ಲು ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಲೀಲ್ ನಿಝಾಮಿ ಎಮ್ಮೆಮಾಡು ಉದ್ಘಾಟನೆ ನೆರವೇರಿಸಿದರು. ಖ್ಯಾತ ವಾಗ್ಮಿ ಜಲೀಲ್ ಸಖಾಫಿ ಕಡಲುಂಡಿ ಹುಬ್ಬುರ್ರಸೂಲ್ ಭಾಷಣ ಮಾಡಿದರು. ಕೆ.ಸಿ.ಎಫ್. ಅಂತರ್ರಾಷ್ಟ್ರೀಯ ನಾಯಕ ಅಲಿ ಮುಸ್ಲಿಯಾರ್ ಬಹರೈನ್, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಸಮಾರಂಭಕ್ಕೆ ಶುಭ ಹಾರೈಸಿದರು.
ಉಸ್ಮಾನ್ ಹಾಜಿ ನಾಪೋಕ್ಲು, ಯುಎಇ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ, ಹಮೀದ್ ನಾಪೋಕ್ಲು, ಅಹ್ಮದ್ ಚಾಮಿಯಾಲ್, ಮುಹಮ್ಮದ್ ಹಾಜಿ ಕೊಂಡಂಗೇರಿ, ಇಬ್ರಾಹಿಂ ಫೈಝಿ ಚಾಮಿಯಲ್ ಸೇರಿದಂತೆ ಸಾಂಘಿಕ, ಸಾಮಾಜಿಕ ರಂಗದ ಪ್ರಮುಖರು, ಯುಎಇ ವಿವಿಧ ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿ. ಪಂ. ಸದಸ್ಯ ಲತೀಫ್, ಅಂತರರಾಷ್ಟ್ರೀಯ ಖುರ್ಆನ್ ಸ್ಪರ್ಧೆಯ ವಿಜೇತ ಹಾಫಿಝ್ ದರ್ವೀಷ್ ಅಲಿ ಬಹರೈನ್ ಇವರುಗಳನ್ನು ಸನ್ಮಾನಿಸಲಾಯಿತು.