ಶನಿವಾರಸಂತೆ, ಜ. 2: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಮೂದ್ರವಳ್ಳಿ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ವಹಿಸಿದ್ದರು.
ಕಾನೂನುಗಳನ್ನು ಪಾಲಿಸಿ, ಕರ್ತವ್ಯಗಳನ್ನು ಗೌರವಿಸಿದಲ್ಲಿ ಅಪರಾಧಗಳನ್ನು ತಡೆಗಟ್ಟಿ ಸ್ವಸ್ಥ ಸಮಾಜ ನಿರ್ಮಿಸಬಹುದು ಎಂದರು.
ಬೀಟ್ ಪೊಲೀಸ್ ಅಧಿಕಾರಿ ಎಂ.ಎಸ್. ಬೋಪಣ್ಣ ಮಾತನಾಡಿ, ವಿವಿಧ ಅಪರಾಧಗಳ ಬಗ್ಗೆ ಹಾಗೂ ಅವುಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ, ಸಲಹೆ, ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಗ್ರಾಮಸ್ಥರಾದ ಪವನ್ ಕುಮಾರ್, ಪ್ರಸನ್ನ, ರಾಜಪ್ಪ, ಧರ್ಮಪ್ಪ, ಮಲ್ಲಪ್ಪ, ಶಶಿಕುಮಾರ್ ಹಾಗೂ ಇತರ ಬೀಟ್ ಸದಸ್ಯರು ಉಪಸ್ಥಿತರಿದ್ದರು.