ಕೂಡಿಗೆ, ಜ.2 : ಇಲ್ಲಿನ ಗುಮ್ಮನಕೊಲ್ಲಿಯ ಬಸವೇಶ್ವರ ಯುವಕ ಸಂಘದ ವತಿಯಿಂದ ಪವನ್ ಜ್ಞಾಪಕಾರ್ಥವಾಗಿ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ಗುಮ್ಮನಕೊಲ್ಲಿ ಸರ್ಕಾರಿ ಶಾಲೆಯ ಮೈದಾನದಲ್ಲಿ ನಡೆಯಿತು. ಪಂದ್ಯಾವಳಿಯಲ್ಲಿ ಪ್ರವೀಣ್ ಸಿ. ತಂಡ ಪ್ರಥಮ ಸ್ಥಾನ ಹಾಗೂ ಚೆರಿಯಮನೆ ಚಕ್ರವರ್ತಿ ತಂಡ ದ್ವಿತೀಯ ಸ್ಥಾನ ಗಳಿಸಿತು. ವಿಜೇತರಿಗೆ ಬಹುಮಾನವನ್ನು ಗ್ರಾ.ಪಂ. ಸದಸ್ಯ ಗಣೇಶ್ ವಿತರಿಸಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಅರುಣ್ ಚಂದ್ರ, ವಿಶ್ವ, ಅಬ್ದುಲ್ ಖಾದರ್, ಸರಸ್ವತಿ, ಶಾಲಾ ಮುಖ್ಯೋಪಾಧ್ಯಾಯ ಲೋಕೇಶ್ ಸೇರಿದಂತೆ ಬಸವೇಶ್ವರ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.