ಬೆಂಗಳೂರು, ಜ. 2: ಕೊಡವ ಬುಡಕಟ್ಟು ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಕುಲಶಾಸ್ತ್ರ ಅಧ್ಯಯನ ಸಮೀಕ್ಷೆಗೆ ಕೊಡವ ಜನಾಂಗದವರು ಸೇರಿದಂತೆ ಇತರರು ಸಹಕಾರ ನೀಡಬೇಕೆಂದು ರಾಜ್ಯ ಸಮಾಜ ಕಲ್ಯಾಣ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಮನವಿ ಮಾಡಿದ್ದಾರೆ.ಕುಲಶಾಸ್ತ್ರ ಅಧ್ಯಯನಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಇದರ ಸಮೀಕ್ಷೆಗೆ ಮರುಚಾಲನೆ ನೀಡಿರುವ ಬಗ್ಗೆ ಇಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಇತರರು ಸಚಿವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಸಂದರ್ಭ ಸಚಿವರು ಈ ಬಗ್ಗೆ ಮನವಿ ಮಾಡಿದರು. ಈ ನಿಯೋಗದಂತೆ ವಿಚಾರದ ಕುರಿತು ಚರ್ಚಿಸಿದ ಸಚಿವರು ಅಧ್ಯಯನ

(ಮೊದಲ ಪುಟದಿಂದ) ಕಾರ್ಯಕ್ಕೆ ಕೊಡಗಿನ ಜನತೆ ಸಹಕರಿಸಬೇಕಿದೆ ಎಂದರು. ಈ ಸಂದರ್ಭ ವೀಣಾ ಅಚ್ಚಯ್ಯ ಅವರೊಂದಿಗೆ ಕೆಪಿಸಿಸಿ ಸದಸ್ಯರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ತೆನ್ನೀರ ಮೈನಾ, ಕೊಡವ ಸಮಾಜದ ಪ್ರಮುಖ ಮಂಡೀರ ಬೋಪಣ್ಣ ಪಾಲ್ಗೊಂಡಿದ್ದರು.ಕೊಡವ ಬುಡಕಟ್ಟು ಕುಲಶಾಸ್ತ್ರ ಅಧ್ಯಯನ: ಸಹಕಾರಕ್ಕೆ ಮನವಿ.