ಭಯೋತ್ಪಾದನೆ ನಿಗ್ರಹಿಸಲು ವಿಫಲವಾಗಿರುವ ಪಾಕಿಸ್ತಾನಕ್ಕೆ ಆರ್ಥಿಕ ನೆರವು ತಡೆಯಲು ಅಮೇರಿಕಾ ಅಧ್ಯಕ್ಷ ಟ್ರಂಪ್ ಮುನ್ನೆಚ್ಚರಿಕೆ. ಕಳೆದ ಹದಿನೈದು ವರ್ಷಗಳಿಂದ ಪಾಕಿಸ್ತಾನಕ್ಕೆ ರೂ. 210 ಲಕ್ಷ ಕೋಟಿಗೂ ಅಧಿಕ ಧನ ಸಹಾಯ ಮಾಡಿ ಮೂರ್ಖರಾಗಿ ದ್ದೆವು ಎಂದು ಟ್ರಂಪ್ ಹೇಳಿಕೆ. ಅಲ್ಲದೆ ಪಾಕಿಸ್ತಾನಕ್ಕೆ ನೀಡುತ್ತಿದ್ದ 1,628 ಕೋಟಿ ರೂಪಾಯಿ ಸೇನಾ ನೆರವಿಗೆ ಟ್ರಂಪ್ ಕತ್ತರಿ ಪ್ರಯೋಗ.

ರಷ್ಯಾ ವಿಮಾನ ಪತನದಿಂದ 79 ಮಂದಿ ಸಾವು.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‍ನಲ್ಲಿ ಕಾಮನ್‍ವೆಲ್ತ್ ಕ್ರೀಡಾ ಕೂಟಕ್ಕೆ ಚಾಲನೆ. 71 ರಾಷ್ಟ್ರ ಗಳಿಂದ 6,600 ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ. ಭಾರತಕ್ಕೆ ಸಿಂಧೂ ಸಾರಥ್ಯ.

ಅಫ್‍ಘಾನ್ ಬಾಗ್‍ದಾದ್ ಪ್ರಾಂತ್ಯದಲ್ಲಿ ಕಂಪೆನಿಯೊಂದರ ನೌಕರ ರಾದ 6 ಮಂದಿಯ ಭಾರತೀಯರನ್ನು ಅಪಹರಣ ಗೈದರು.

ಅಮೇರಿಕಾದ ಟ್ರಂಪ್ ಸರಕಾರದಿಂದ ಭಾರತದ ವಾಣಿಜ್ಯ ಲೋಕಕ್ಕೆ ಹೊಡೆತ. ಅಮೇರಿಕಾಕ್ಕೆ ಆಮದಾಗುವ ಕೆಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಟ್ರಂಪ್ ಸರಕಾರ ಶೇ. 25 ರಷ್ಟು ಏರಿಸಿತು. ಇದಕ್ಕೆ ಪ್ರತಿಯಾಗಿ ಭಾರತ ಸರಕಾರ ಅಮೇರಿಕಾದ 21 ವಸ್ತುಗಳ ಮೇಲಿನ ಸುಂಕವನ್ನು ಭಾರತದಲ್ಲಿ ಹೆಚ್ಚಿಸಿತು.

ಭ್ರಷ್ಟಾಚಾರ ಕಳಂಕ ಹೊತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಪಾಕಿಸ್ತಾನದ ನ್ಯಾಷನಲ್ ಅಕೌಂಟೆಬೆಲಿಟಿ ಬ್ಯೂರೋ 10 ವರ್ಷ ಜೈಲು ಶಿಕ್ಷೆ ವಿಧಿಸಿತು. ಅವರ ಪುತ್ರಿ ಮರಿಯಂಗೆ ಏಳು ವರ್ಷ ಶಿಕ್ಷೆ ವಿಧಿಸಿತು.

ಥೈಲ್ಯಾಂಡ್‍ಗೆ ಪ್ರವಾಸಕ್ಕಾಗಿ ತೆರಳಿದ 12 ಬಾಲಕರು ಮತ್ತು ಕೋಚ್ ತೀವ್ರ ಮಳೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಗುಹೆಯೊಂದಕ್ಕೆ ನುಗ್ಗಿ ಸಿಲುಕಿ ಕೊಂಡರು. 15 ದಿನಗಳ ಕಾರ್ಯಾಚರಣೆ ಬಳಿಕ ಹಲವರನ್ನು ರಕ್ಷಿಸಲಾಯಿತು.

ಫೀಫಾ ವಿಶ್ವಕಪ್ ಫುಟ್‍ಬಾಲ್ ಸ್ಪರ್ಧೆಯಲ್ಲಿ 20 ವರ್ಷಗಳ ಬಳಿಕ 2ನೇ ಬಾರಿಗೆ ಫ್ರಾನ್ಸ್ ತಂಡವು ವಿಶ್ವಕಪ್ ವಶಪಡಿಸಿಕೊಂಡಿತು.

ಪಾಕಿಸ್ತಾನದ ಚುನಾವಣೆ ಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಿ.ಟಿ.ಐ. ಪಕ್ಷ ಜಯಭೇರಿ ಬಾರಿಸಿ ಅಧಿಕಾರ ಪಡೆಯಿತು.