ಮಡಿಕೇರಿ, ಡಿ. 31: ಇಲ್ಲಿನ ಮಂಗಳಾದೇವಿ ನಗರದಲ್ಲಿ ಇಂದು ಯುವಕನೊಬ್ಬ ನೇಣು ಬಿಗಿದುಕೊಂಡು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಕುಮಾರ್ (23) ಎಂಬಾತ ತಾನು ಸಾಯುವ ಮುನ್ನ ಪತ್ರವೊಂದನ್ನು ಬರೆದಿಟ್ಟಿದ್ದಾಗಿ ತಿಳಿದು ಬಂದಿದೆ. ಯುವಕನ ತಂದೆ ಹಲವಷ್ಟು ಅಪರಾಧ ಹಿನ್ನೆಲೆಯೊಂದಿಗೆ ಕುಶಾಲನಗರದ ವೈದ್ಯ ಡಾ. ದಿಲೀಪ್‍ಕುಮಾರ್ ಹತ್ಯೆ ಸಂಬಂಧ ಪೊಲೀಸ್ ವಿಚಾರಣೆಗೆ ಒಳಪಡಿಸಿರುವ ಗುಮಾನಿಯಿದೆ.
ಈ ಕಾರಣದಿಂದ ಮೃತ ಜಯಕುಮಾರ್ ಪೊಲೀಸರಿಂದ ಕಿರುಕುಳದ ಕುರಿತು ಪತ್ರ ಬರೆದಿಟ್ಟು, ಸಾವಿಗೆ ಶರಣಾಗಿರುವದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರು ಜಿಲ್ಲಾಸ್ಪತ್ರೆಯ ಶವಗಾರ ಬಳಿ ಜಮಾಯಿಸಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಡಿವೈಎಸ್ಪಿ ಕೆ.ಎಸ್. ಸುಂದರರಾಜ್, ವೃತ್ತ ನಿರೀಕ್ಷಕ ಅನುಪ್ ಮಾದಪ್ಪ, ಠಾಣಾಧಿಕಾರಿ ಷಣ್ಮುಗ ಅವರುಗಳು ಪರಿಸ್ಥಿತಿ ತಿಳಿಗೊಳಿಸಿದರು.